ಸುದ್ಧಿಕನ್ನಡ ವಾರ್ತೆ
ಪಣಜಿ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಗೋವಾಕ್ಕೆ ಭಾರಿ ಪ್ರಮಾಣದಲ್ಲಿ ಚೆಂಡು ಹೂವುಗಳ ಆವಕವಾಗಿದೆ. ಇದರಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಗೋವಾದಲ್ಲಿ ಚೆಂಡು ಹೂವುಗಳ ದರ ಕಡಿಮೆಯಾಗಿದೆ.

ಪ್ರಸಕ್ತ ವರ್ಷ ಗೋವಾ ರಾಜ್ಯದಲ್ಲಿ ಸ್ಥಳೀಯವಾಗಿ ಚೆಂಡು ಹೂವುಗಳ ಉತ್ಪಾದನೆ ಕಡಿಮೆಯಾಗಿದೆ ಎಂದೇ ಹೇಳಲಾಗುತ್ತಿದೆ. ಇದರಿಂದಾಗಿ ಪ್ರಸಕ್ತ ವರ್ಷ ದಸರಾ ಹಬ್ಬದಂದು ಕರ್ನಾಟಕದಿಂದ ಬಂದ ಚೆಂಡು ಹೂವುಗಳನ್ನೇ ಹೆಚ್ಚಾಗಿ ಅವಲಂಭಿಸಿರುವಂತಾಗಿದೆ. ಕರ್ನಾಟಕದಿಂದ ಗೋವಾದ ವಿವಿಧ ಮಾರುಕಟ್ಟೆಗೆ 10 ರಿಂದ 20 ಟನ್ ಚೆಂಡು ಹೂವು ಆವಕವಾಗಿದೆ.

ಕಳೆದ ವರ್ಷ ಗೋವಾದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ಪ್ರತಿ ಕೆಜಿ ಚೆಂಡು ಹೂವನ್ನು 200 ರೂ ದರದಲ್ಲಿ ಮಾರಾಟ ಮಾಡಲಾಗಿತ್ತು. ಆದರೆ ಪ್ರಸಕ್ತ ವರ್ಷ ಪ್ರತಿ ಕೆಜಿ ಚೆಂಡು ಹೂವಿಗೆ 80 ರಿಂದ 100 ರೂ ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ಕರ್ನಾಟಕದಿಂದ ಭಾರಿ ಪ್ರಮಾಣದಲ್ಲಿ ಗೋವಾಕ್ಕೆ ಚೆಂಡು ಹೂವುಗಳ ಆವಕವಾಗಿರುವ ಕಾರಣ ದರ ಕಡಿಮೆಯಾಗಿದೆ ಎಂದೇ ಹೇಳಲಾಗುತ್ತಿದೆ.