ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಜೊಯಿಡಾ ತಾಲೂಕಿನ ರಾಮನಗರ ವ್ಯಾಪ್ತಿಯಲ್ಲಿರುವ , ತಿನೈಘಾಟದಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವ ಮೃತ ಪಟ್ಟಿರುತ್ತಾನೆ. ಮೃತಪಟ್ಟ ವ್ಯಕ್ತಿಯ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಈ ಘಟನೆಯಲ್ಲಿ ಹೈದರಾಬಾದದಿಂದ ಗೋವಾ ಕಡೆಗೆ ಹೋಗುತ್ತಿದ್ದ ವಿ.ಆರ್.ಎಲ್, ಬಸ್ ಮ್ಯಾಂಗನೀಸ್ ತುಂಬಿದ ಟ್ರಕ್ ನ್ನು ಓವರ್ ಟೇಕ್ ಮಾಡಲು ಹೋದಾಗ ಎದುರಿಗೆ ಬಂದ ಟಾಟಾ ಪಿಕ್ ಅಪ್ ಗೆ ಡಿಕ್ಕಿ ಆಗಿದೆ. ಡಿಕ್ಕಿ ರಭಸಕ್ಕೆ ಪಿಕ್ ಅಪ್ ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಅದೇ ವೇಳೆ ಪಿಕ್ ಅಪ್ ಹಿಂದೆ ಬರುತ್ತಿದ್ದ ಬುಲೆಟ್ ಬೈಕ್ ಕೂಡ ಅಪಘಾತಕ್ಕೆ ಸಿಲುಕಿ ಹಾನಿಯಾಗಿದೆ. ಬಸ್ ಹಾಗೂ ಪಿಕ್ ಅಪ್ ನುಜ್ಜು ಗುಜ್ಜಾಗಿದ್ದು ಕೆಲವು ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಕುರಿತು ರಾಮನಗರ ಪಿಎಸ್ಐ ಮಹಾಂತೇಶ ನಾಯಕ ಪ್ರಕರಣ ದಾಖಲಿಸಿದ್ದು ಹೆಚ್ಚಿನ ತನಿಖೆ ನಡೆಸಿದ್ದಾರೆ.