ಸುದ್ಧಿಕನ್ನಡ ವಾರ್ತೆ
ಪಣಜಿ: ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಪ್ಟೆಂಬರ್ 26 ರಂದು ಆಯೋಜಿಸಿದ್ದ ರಾಜ್ಯಮಟ್ಟದ ಶ್ರೀ ವಿರಾಟ್ ವಿಶ್ವಕರ್ಮ ಮಹೋತ್ಸವ-2025 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿಯವರ ಗೋವಾ ಮತ್ತು ಕರ್ನಾಟಕದಲ್ಲಿ ಕೈಗೊಂಡ ಸಾಮಾಜಿಕ ಸೇವಾ ಕಾರ್ಯ ಗುರುತಿಸಿ”ವಿಶ್ವಕರ್ಮ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಿದ್ಧಣ್ಣ ಮೇಟಿಯವರು ಹೊರನಾಡ ಗೋವಾದಲ್ಲಿ ಕನ್ನಡ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ 2025 ನೇಯ ಸಾಲಿನ ವಿಶ್ವಕರ್ಮ ಸೇವಾ ರತ್ನ ಪ್ರಶ್ತಿ ನೀಡಿ ಗೌರವಿಸಲಾಗಿದೆ.

ಕನ್ನಡಿಗರು ಹೋರ ರಾಜ್ಯವಾದ ಗೋವಾದಲ್ಲಿ ಉದ್ಯೋಗ ಅರಸಿ ಗೋವಾಕ್ಕೆ ಬಂದ ಕನ್ನಡಿಗರನ್ನು ಸಂಘಟಿಸಿದ ಸಿದ್ಧಣ್ಣ ಮೇಟಿಯವರು ಗೋವಾದಲ್ಲಿ ಕನ್ನಡಿಗರು,ಕನ್ನಡ ಬಾಷೆ, ಕನ್ನಡ ಶಾಲೆ ,ಕನ್ನಡ ಸಂಘಟನೆಗಳು ವಿವಿಧ ಕನ್ನಡ ಪರಸಂಘಟನೆಗಳ ಜೊತೆ ವಿಶೇಷ ಬಾಂದವ್ಯ ಹೊಂದಿ ಸುಮಾರು ವರ್ಷಗಳಿಂದ ಕನ್ನಡಿಗರ ನೋವು ನಲಿವುಗಳಲ್ಲಿಬಾಗಿಯಾಗುತ್ತಾ ಗೋವಾದಲ್ಲಿ ಕನ್ನಡಸಾಹಿತ್ಯ, ಕನ್ನಡ ಸಂಗೀತ ಕಲೆ ಕನ್ನಡ ಸಂಸ್ಕøತಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಕನ್ನಡಿಗರ ಪರ ಧ್ವನಿ ಎತ್ತುತ್ತಾ ಕನ್ನಡಿಗರ ನೋವಿಗೆ ಸವಂದಿಸುತ್ತಿರುವ ಗೋವಾ ಕನ್ನಡಿಗರಅಣ್ಣಾಎಂದೇ ಹೆಸರುವಾಸಿಯಾಗಿರುವ ಕನ್ನಡಸಾಹಿತ್ಯಪರಿಷತ್ತು ಗಡಿನಾಡ ಘಟಕ ಗೋವಾದ ಅಧ್ಯಕ್ಷರಾದ ಸಿದ್ದಣ್ಣ ಮೇಟಿ ಯವರಿಗೆ ಕರ್ನಾಟಕದ ಬೆಂಗಳೂರಿನ ಪ್ರತಿಷ್ಠಿತ ವಿಶ್ವಕರ್ಮ ಪ್ರತಿಷ್ಠಾನ ಕೊಡಮಾಡುವ ವಿಶ್ವಕರ್ಮ ಸೇವಾ ರತ್ನ ನೀಡಿ, ಗೌರವಿಸಿದೆ.