ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ತಾಲೂಕಿನ ಪ್ರವಾಸೋದ್ಯಮಿ ಗಳು ಪರಿಸರ ಸ್ವಚ್ಛ ಮಾಡಿದರು.
ತಾಲೂಕಿನ ಗಣೇಶ ಗುಡಿ ಪ್ರವಾಸೋದ್ಯಮದ ಹೆಬ್ಬಾಗಿಲು ಇಲ್ಲಿ ನಿರ್ಮಿಸಿದ ಸುಪಾ ಜಲಾಶಯ ವಿಶ್ವದ ಕೆಲವೇ ಕೆಲವು ಜಲಾಶಯಗಳಲ್ಲಿ ಒಂದು ಅದ್ಬುತ ಎನಿಸಿದೆ. ಇಲ್ಲಿನ ಜಲಾಶಯ ಸುಪಾ ಈಗ ತುಂಬಿ ಕೊಂಡಿದೆ, ಜೋಯಿಡಾ ಹಳಿಯಾಳ ಶಾಸಕರು, ಆಡಳಿತ ಸುಧಾರಣ ಸಮಿತಿ ಅಧ್ಯಕ್ಷರೂ ಆದ ಆರ್ ವಿ ದೇಶಪಾಂಡೆ ಅವರು ಇತ್ತೀಚಿಗೆ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೂಲಕ ಜಲದೇವತೆಯನ್ನು ಗೌರವಿಸಿದ್ದಾರೆ ಇಂತ ಸ್ಥಳದಲ್ಲಿ ಇಂದು ಪರಿಸರವನ್ನು ಸ್ವಚ್ಛ ಮಾಡಲಾಯಿತು.
ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆ ಕಾರವಾರ ಮತ್ತು ಪ್ರವಾಸೋದ್ಯಮ ಉದ್ಯಮ ದಾರರ ಸಂಘ ಸುಪಾ ವಾಟರ್ ಆಕ್ಟಿವಿಟಿಸ್ ಇವರ ಸಹಯೋಗದಲ್ಲಿ ಸ್ವಚ್ಛತೆಯನ್ನ ಮಾಡಲಾಯಿತು.ಹೋರ್ನ್ ಬಿಲ್ ರೆಸಾರ್ಟ್ ದಿಂದ ಸುಪಾ ಜಲಾಶಯದ ವರೆಗೂ ಎಲ್ಲರೂ ರಸ್ತೆ ಅಕ್ಕ ಪಕ್ಕ ಸ್ವಚ್ಛತೆ ಕೈ ಕೊಂಡರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸುಸ್ಥಿರ ಪರಿವರ್ತನೆ ಎಂಬ ಘೋಷಣೆ ಮಾಡಲಾಯಿತು. ಸ್ವಚ್ಛತಾ ಸಂದರ್ಭದಲ್ಲಿ ಸುಪಾ ವಾಟರ್ ಆಕ್ಟಿವಿಟಿಸ್ ನ ಉದ್ಯಮ ದಾರರು ಪದಾಧಿಕಾರಿಗಳು, ಸಿಬ್ಬಂದಿಗಳು ಬೋಟ್ ಗೈಡ್ ಗಳು ಎಲ್ಲರೂ ಭಾಗವಹಿಸಿದ್ದರು.ಸುಪಾ ದ ಕಾಳಿ ನದಿಯಲ್ಲಿ ನೀರಿನ ಮೂಲಕ ಗಣೇಶ ಗುಡಿ ಯಿಂದ ರಾಫ್ಟಿಂಗ್ ಹೋಗಿ ಮಾವಲಿಂಗ ದಲ್ಲಿ ಹೊರಬೀಳುವ ಮೂಲಕ ಅದ್ಬುತ ಅನುಭವ ಪಡೆಯಲು ಒಮ್ಮೆ ಬನ್ನಿ ಎಂದು ಗಣೇಶ ಗುಡಿ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ.