ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಜೋಯಿಡಾ ತಾಲೂಕಿನಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಂಗವಾಗಿ “ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್” ವಿಶೇಷ ಶ್ರಮದಾನ ಕಾರ್ಯಕ್ರಮವನ್ನುಗುರುವಾರ ಬೆಳಗ್ಗೆ 8.00 ಗಂಟೆಯಿಂದ 9.00 ಗಂಟೆವರೆಗೆ ಮಾಡಲಾಯಿತು ಬಸ್ ನಿಲ್ದಾಣದಿಂದ ಪ್ರಾರಂಭಿಸಿ ಶಿವಾಜಿ ಸರ್ಕಲ್ವರೆಗೆ ಸ್ವಚ್ಛತೆ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಬಸ್ ನಿಲ್ದಾಣ ಆವರಣದಲ್ಲಿ ವಿಶೇಷ ಶ್ರಮದಾನ ಕಾರ್ಯಕ್ರಮದ ಕುರಿತು ತಿಳಿಸಿ ಶಾಸಕರ ಸಂದೇಶವನ್ನು ಕಾರ್ಯನಿರ್ವಹಣಾಧಿಕಾರಿಗಳು ಓದಿದರು ನಂತರ ವಿವಿಧ ಇಲಾಖೆಗಳ ಸಿಬ್ಬಂದಿಗಳು ಬಸ್ ನಿಲ್ದಾಣದಿಂದ ಶಿವಾಜಿ ಸರ್ಕಲ್ವರೆಗೆ ರಸ್ತೆಯ ಎರಡೂ ಬದಿಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಮುಕ್ತಾಯ ಸಂದರ್ಭದಲ್ಲಿ ಶಿವಾಜಿ ಸರ್ಕಲ್ನಲ್ಲಿ ಮಾನ್ಯ ತಹಶೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು ನೂರಾರು ಜನರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಸಮಯದಲ್ಲಿ ಸಂಗ್ರಹಿಸಲಾದ ಅಂದಾಜು ಕಸದ ತೂಕ: 80 ಕೆ.ಜಿ.ಯಷ್ಟು. ಈ ಕಸವನ್ನು ಗ್ರಾಮ ಪಂಚಾಯತ ದವರು ವಿಲೇವಾರಿ ಮಾಡಿದರು. ತಹಸೀಲ್ದಾರ್ ಮಂಜುನಾಥ್ ಮುನ್ನೊಳ್ಳಿ ಮತ್ತು ತಾಲೂಕು ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಎನ್ ಭಾರತಿ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಕಾರದಲ್ಲಿ ಈ ಸ್ವಚ್ಛತಾ ಆಂದೋಲನ ನಡೆಯಿತು, ಶಾಸಕರು, ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರೂ ಆಗಿರುವ ಆರ್ ವಿ ದೇಶಪಾಂಡೆ ಅವರು ಈ ಕುರಿತು ಸಂದೇಶ ನೀಡಿದ್ದರು.