ಸುದ್ದಿ ಕನ್ನಡ ವಾರ್ತೆ
ಜೋಯಿಡಾ :
ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಫಣಸೋಲಿ ಆನೆ ಶಿಬಿರದಲ್ಲಿದ್ದ ಗೌರಿ ಎಂಬ ಎರಡು ವರ್ಷದ ಹೆಣ್ಣಾನೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಇಂದು ಗುರುವಾರ ಸಾವನ್ನಪ್ಪಿದೆ.

ಆನೆಯ ಅಂತ್ಯಕ್ರಿಯೆಯನ್ನು ಅರಣ್ಯ ಇಲಾಕೆ ಮಾಡಿದೆ. ತುಂಬಾ ದುಃಖ ವ್ಯಕ್ತ ಪಡಿಸಿದ ಇಲಾಖೆಯ ಎ.ಸಿ.ಎಪ್ ಎಮ್ ಎಸ್ ಕಳ್ಳಿಮಠ ಫಣಸೋಲಿ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ, ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ,ಪರಿಸರ ಪ್ರೇಮಿ ರಾಹುಲ್ ಬಾವುಜಿ ಜೊತೆಗೆ, ಪಶು ವೈಧ್ಯರು ,ಸ್ಥಳೀಯರಾದ ದೀಪಕ ತೇಲಿ,ಇತರ ಅರಣ್ಯ ಇಲಾಕೆ ಸಿಬ್ಬಂದಿಗಳು ಇದ್ದರು.