ಸುದ್ದಿ ಕನ್ನಡ ವಾರ್ತೆ
ಶಿರಸಿ: ದಾಂಡೇಲಿ ಅಳ್ನಾವರ ತನಕ ಬರುತ್ತಿದ್ದ ರೈಲ್ವೆ ಪುನಃ ಆರಂಭವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಅವರು ನಗರದಲ್ಲಿ ಮಾತನಾಡಿ, ಕೊರೋನಾ ಕಾಲದಲ್ಲಿ ನಿಂತಿದ್ದ ಮಾರ್ಗವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಲ್ಲಿ ಚರ್ಚಿಸಿ, ಮನವರಿಕೆ ಮಾಡಲಾಗಿತ್ತು. ಉತ್ತರ ಕನ್ನಡದ ಘಟ್ಟದ ಮೇಲ್ಭಾಗದಲ್ಲಿ ಇದ್ದ ಏಕ ಮೇವ ರೈಲ್ವೆ ನಿಂತಿತ್ತು. ಮರಳಿ ಆರಂಭಿಸಲಾಗುತ್ತಿರುವದು ಸಂತಸ ತಂದಿದೆ. ಆ ಭಾಗದ ಜನರ ಬಹುಕಾಲದ ಬೇಡಿಕೆಗೆ ಕೇಂದ್ರ ಸರಕಾರ ಸ್ಪಂದಿಸಿದೆ ಎಂದರು.
ತಾಳಗುಪ್ಪ ಶಿರಸಿ ಟ್ರೇನ್ ಕೂಡ ಆಗಲಿದೆ ಎಂದೂ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.