ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ರಾಮ ಕಾಣಕೋಣಕರ್ ರವರ ಮೇಲೆ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಜೆನಿಟೊ ಕಾರ್ಡೋಜ್ (ಸಾಂತಾ ಕ್ರೂಜ್) ನನ್ನು ಉತ್ತರ ಗೋವಾದ ಪಣಜಿಯಲ್ಲಿರುವ ಹೋಟೆಲ್ನಲ್ಲಿ ಬಂಧಿಸಲಾಗಿದೆ ಎಂದು Police ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಮ ಕಾಣಕೋಣಕರ್ ಮೇಲೆ ದಾಳಿ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಜೆನಿಟೊ ಕಾರ್ಡೋಜ್ ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ. ಪೆÇಲೀಸ್ ಇನ್ಸ್ಪೆಕ್ಟರ್ ವಿಜಯ್ಕುಮಾರ್ ನೇತೃತ್ವದ ತಂಡವು ಶಂಕಿತ ಮಾಸ್ಟರ್ ಮೈಂಡ್ ಜೆನಿಟೊ ಕಾರ್ಡೋಜ್ನನ್ನು ಬಂಧಿಸಿದ್ದಾರೆ. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ ಎಂದು Police ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ಹೇಳಿದ್ದಾರೆ.
ಸೆಪ್ಟೆಂಬರ್ 18, 2025 ರಂದು ಪಣಜಿಯ ಸಮೀಪದ ಕರಂಜಾಲೆಯಲ್ಲಿ ಹಗಲು ಹೊತ್ತಿನಲ್ಲಿ ರಾಮ ಕಾಣಕೋಣಕರ್ ಮೇಲೆ ದಾಳಿ ನಡೆಸಲಾಯಿತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ 7 ಜನರನ್ನು ಬಂಧಿಸಲಾಗಿದೆ ಮತ್ತು ಜೆನಿಟೊ ಎಂಟನೇ ಶಂಕಿತ ಆರೋಪಿಯಾಗಿದ್ದಾನೆ.
ರಾಮ ಕಾಣಕೋಣಕರ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ನನ್ನು ಭಾನುವಾರದೊಳಗೆ ಬಂಧಿಸಬೇಕೆಂಬ ಆಘ್ರಹ ವ್ಯಕ್ತವಾಗಿತ್ತು.ರಾಮ ಕಾಣಕೋಣಕರ್ ಮೇಲಿನ ದಾಳಿಯ ನಂತರ, ಪಣಜಿ ಪ್ರದೇಶದಲ್ಲಿ police ಬಲವಾದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಇದುವರೆಗೆ 23 ಗೂಂಡಾಗಳನ್ನು ಬಂಧಿಸಲಾಗಿದೆ. ರಾಮ ಕಾಂಕೋಣಕರ್ ಮೇಲೆ ದಾಳಿ ನಡೆಸಿದ ಗೂಂಡಾಗಳ ಗುಂಪಿನ ಇಬ್ಬರು ಗೂಂಡಾಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ. ಇಬ್ಬರೂ ರಾಮ ಕಾಣಕೋಣಕರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಪೆÇಲೀಸ್ ವರಿಷ್ಠಾಧಿಕಾರಿ ಗುಪ್ತಾ ತಿಳಿಸಿದ್ದಾರೆ.
Police ವರಿಷ್ಠಾಧಿಕಾರಿ ಗುಪ್ತಾ ಅವರು ಅಪರಾಧದಲ್ಲಿ ಬಳಸಲಾದ ವಾಹನಗಳನ್ನು ಸಹ ಗುರುತಿಸಿದ್ದಾರೆ. ಇದು ಪೆÇಲೀಸರಿಗೆ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ರಾಮ ಕಾಣಕೋಣಕರ್ ಮೇಲಿನ ದಾಳಿಯ ಹಿಂದಿನ ಉದ್ದೇಶ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ, ಆದರೆ ಹಿಂದಿನ ದ್ವೇಷವಿತ್ತು ಎಂದು ತೋರುತ್ತದೆ ಎಂದು ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ಹೇಳಿದ್ದಾರೆ.
ರಾಮ ರವರ ಮೇಲೆ ದಾಳಿ ಮಾಡಲು ಸುಪಾರಿ ನೀಡಿರಬಹುದು. ಬಂಧಿತ 7 ಆರೋಪಿಗಳ ಸಂಪೂರ್ಣ ವಿಚಾರಣೆ ಮತ್ತು ಲಭ್ಯವಿರುವ ಎಲ್ಲಾ ಪುರಾವೆಗಳು ಜೆನಿಟೋ ಆರೋಪಿಗಳನ್ನು ಈ ಘೋರ ಕೃತ್ಯ ಎಸಗುವಂತೆ ಕೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ ಎಂದು ಅವರು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸುದ್ಧಿಗಾರರೊಂದಿಗೆ ಮಾತನಾಡಿ- ಗೋವಾ ವಿದ್ಯಾವಂತ ರಾಜ್ಯ. ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವವರನ್ನು ಬಿಡಲಾಗುವುದಿಲ್ಲ. ಯಾವುದೇ ರಾಜಿ ಮಾಡಿಕೊಳ್ಳಲಾಗುವುದಿಲ್ಲ, ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ಎಚ್ಚರಿಸಿದ್ದಾರೆ.