ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದ ರಾಮನಗರದಲ್ಲಿ ಹನುಮಾನ್ ಲೈನ್ ಶಾಲೆಯ ಸಂಘಟನೆಯಲ್ಲಿ ರಾಮನಗರ ಶಾಲೆಯಲ್ಲಿ ದಿನಾಂಕ:ಶುಕ್ರವಾರ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂದಿಗದ್ದೆಯ ವಿಧ್ಯಾರ್ಥಿಗಳು ಬಾಲಕರ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ
ಸ್ಥಾನ ಪಡೆದಿದ್ದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತಾ,ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಸಾಧನೆಗೈಯಲಿ ಎಂದು
ಶಿಕ್ಷಕವೃಂದ ಎಸ್.ಡಿ.ಎಂ.ಸಿ.ಪದಾಧಿಕಾರಿಗಳು ಹಾಗೂ ಪಾಲಕ- ಪೋಷಕವೃಂದ
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂದಿಗದ್ದೆಯವರು ಶುಭ ಹಾರೈಸಿದ್ದಾರೆ.