ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಿನಾಂಕ 19/ರಂದು ಜೋಯಿಡಾ ತಾಲೂಕಿನ ರಾಮನಗರ ದಲ್ಲಿ ನಡೆದ14 ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ನಡೆದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಗುಂದ ವಿದ್ಯಾರ್ಥಿಗಳಾದ
ದರ್ಶನ. ಚ.ರಾಯ್ಕರ 80 ಮೀ ಹರ್ಡಲ್ಸ್,ನಲ್ಲಿ ಹಾಗೂ 400 ಮೀ ಓಟದಲ್ಲಿ ಪ್ರಥಮ.ಬಂದಿರುತ್ತಾನೆ. ಅದೇ ರೀತಿ.ನಮ್ಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಿಲ್ವನ ಜೋನ್ ಪರೇರಾ ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆಡದಿದ್ದು ಇಬ್ಬರೂ ವಿದ್ಯಾರ್ಥಿ ಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು. ಗುಂದ ಪ್ರೌಢ ಶಾಲೆಯ ಮುಕ್ಯೋಪಾಧ್ಯಾಯ ಜೋಸೆಫ್ ಜಿ ತಿಳಿಸಿರುತ್ತಾರೆ,

ವಿದ್ಯಾರ್ಥಿಗಳನ್ನು. ಉತ್ತಮ ವಾಗಿ ತರಬೇತಿ ಗೊಳಿಸಿದ ಶಿಕ್ಷಕ ಪಕೀರಪ್ಪಾ, ದರಿಗೊಂಡ ಅವರನ್ನು ಶಿಕ್ಷಕ ವೃಂದ, ಪ್ರೌಢ ಶಾಲೆಯ ಅಧ್ಯಕ್ಷ ಮಾದೇವ್ ವೇಲಿಪ್ ಮತ್ತು ಸದಸ್ಯರು, ಪಾಲಕರು ಅಭಿನಂದಿಸಿದ್ದಾರೆ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಈ ವರ್ಷ ಗುಂದ ಪ್ರೌಢ ಶಾಲೆ ವಿವಿಧ ಸ್ಪರ್ಧೆ ಹಾಗೂ ಇನ್ನಿತರ ಚಟುವಟಿಕೆ ಗಳಲ್ಲಿ ತುಂಬಾ ಸಾಧನೆ ಮಾಡಿದ್ದು, ಗ್ರಾಮಸ್ತರು ಪ್ರೌಢ ಶಾಲೆಯ ಶಿಕ್ಷಕರ ವೃಂದಕ್ಕೆ ಮನತುಂಬಿ ಹರಶಿದ್ದಾರೆ.