ಸುದ್ದಿ ಕನ್ನಡ ವಾರ್ತೆ

ಜೋಯಿಡಾ 16 ಮಂಗಳವಾರ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ್ ದ ಕರ್ಯಾದಿ ಗ್ರಾಮದಲ್ಲಿ ಒಂಟಿ ಸಲಗವು ಸಂಚರಿಸಿ ಸುತ್ತ ಮುತ್ತಲ ಜನರಲ್ಲಿ ಆತಂಕ ತಂದಿದೆ. ಉಳವಿ ಕಡೆಯಿಂದ ಒಂಟಿ ಆನೆ ಬಂದಿರ ಬಹುದೆಂದು ಶಂಕಿಸ ಲಾಗುತ್ತಿದೆ, ಬಂದಿರುವ ಆನೆಯು ಕರಿಯಾದಿ ಗ್ರಾಮದ ಮದ್ಯದಲ್ಲಿರುವ ಸೊಪ್ಪಿನ ಬೆಟ್ಟದಲ್ಲಿ ಬೈನೆ ಮರವನ್ನು ಕೆಡವಿ ತಿಂದಿದೆ. ನಂತರ ಹಾಗೇ ಯರಮುಖ ಗ್ರಾಮದತ್ತ ಹೋಗಿರುವ ಹೆಜ್ಜೆಯ ಗುರುತನ್ನು ಗ್ರಾಮಸ್ಥರು ತೋರಿಸುತ್ತಾರೆ.

ಈ ಆನೆ ಓಡಾಡಿರುವ ಜಾಗ ಗುಂದ ಊರಿನ ಮದ್ಯ ಭಾಗ ವಾಗಿದೆ, ಇಲ್ಲಿನ ರಸ್ತೆಯಲ್ಲಿ ಸದಾ ಜನರು ಕಾಲ್ನಡಿಗೆ ಯಲ್ಲಿ ವಾಹನಗಳಲ್ಲಿ, ಓಡಾಡುತ್ತಲೇ ಇರುತ್ತಾರೆ. ಹಾಗಾಗಿ ಜನರು ಎಚ್ಚರಿಕೆ ಯಿಂದ ಓಡಾಡಲು ಗ್ರಾಮಸ್ಥರು ತಿಳಿಸಿರುತ್ತಾರೆ. ಇದೇ ರಸ್ತೆಯಲ್ಲಿ ಶಾಲೆ ಮತ್ತು ಹೈ ಸ್ಕೂಲ್ ವಿದ್ಯಾರ್ಥಿಗಳು ಓಡಾಡುತ್ತಲೇ ಇರುವ ಕಾರಣ, ತುಂಬಾ ಎಚ್ಚರಿಕೆಯನ್ನು ಅರಣ್ಯ ಇಲಾಖೆ ಕೂಡ ವಹಿಸಿ, ರಾತ್ರಿ ಈ ರಸ್ತೆ ಯಲ್ಲಿ ಗಸ್ತು ತಿರುಗಾಟ ನಡೆಸಿ ಒಂಟಿ ಸಲಗವನ್ನು ಕಾಡಿಗೆ ಕಳಿಸ ಬೇಕೆಂದು ಗ್ರಾಮಸ್ಥರು, ಆಗ್ರಹಿಸಿದ್ದಾರೆ. ರೈತರ ಬದುಕಿಗೆ ಆನೆ ಧಾಳಿ ಇಟ್ಟರೆ, ಬದುಕು ದುಸ್ತರ ವಾಗುವುದರಲ್ಲಿ ಅನುಮಾನವೇ ಇಲ್ಲ. ಎಂಬ ಅಭಿಪ್ರಾಯ ಜನಸಾಮಾನ್ಯರಿಂದ ಕೇಳಿ ಬಂದಿದೆ