ಸುದ್ದಿ ಕನ್ನಡ ವಾರ್ತೆ

ಜೋಯಿಡಾ. 16 ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕದ ಕಾಶ್ಮೀರ ಎಂದೇ ಹೇಳಲಾಗುತ್ತದೆ. ಇಲ್ಲಿನ ವೈವಿದ್ಯತೆಗಳು ಎಂತವರನ್ನೂ ಆಕರ್ಷಸುತ್ತದೆ. ಅದೇ ರೀತಿ ಈ ಜಿಲ್ಲೆಗೆ, ಮುಕುಟ ಪ್ರಾಯದಂತಿರುವ ಜೋಯಿಡಾಕೂಡ ಅತ್ಯಂತ ಸುಂದರ ಕಾಡಿನಿಂದ ತುಂಬಿದ ನಾಡು. ಗೋವಾ ರಾಜ್ಯಕ್ಕೆ ಹೊಂದಿರುವ ಜೋಯಿಡಾದ ಜನರು, ಕೆಲಸ ಕಾರ್ಯಗಳಿಗೆ, ವಿಹಾರಕ್ಕೆ,ಮತ್ತು ನೆಂಟರು, ಇಷ್ಟರು ಎಂದು ಗೋವಾ ದೊಡನೆ ಅತ್ಯಂತ ನಿಕಟ ಸಂಪರ್ಕವನ್ನುಇಟ್ಟು ಕೊಂಡಿದ್ದಾರೆ ಗೋವಾ ರಾಜ್ಯ ದ ಜನತೆ ಮತ್ತು ಕರ್ನಾಟಕ ರಾಜ್ಯದ ಜನತೆ ಅದರಲ್ಲೂ ಜೋಯಿಡಾದ ಜನತೆಯ ಸಂಬಂದ, ಅಕ್ಕ ಪಕ್ಕ ದವರಂತೆ ಇದೆ, ಇತ್ತೀಚಿನ ವರ್ಷಗಳಲ್ಲಿಗೋವಾ ರಾಜ್ಯದ ವಿಧಾನ ಸಭಾ ಅಧ್ಯಕ್ಷರುಈಗಿನಮಂತ್ರಿ ಗಳಾದ, ರಮೇಶ ತವಡಕರ್ ಅವರು ಹಲವಾರು ಬಾರಿ ಜೋಯಿಡಾ ಕ್ಕೆ ಬಂದು ತಮ್ಮ ಕ್ಷೆತ್ರದ ಸಮಸ್ಯೆ ಯಂತೆ ಇಲ್ಲಿನ ಜನರ ಸಮಸ್ಯೆ ಗಳನ್ನು ಆಲಿಸಿದ್ದಾರೆ.

. ಅದು ಅವರ ದೊಡ್ಡ ಗುಣ.ನಮ್ಮ ರಾಜ್ಯದ ಮಂತ್ರಿ ಗಳೇ ನೋಡದ ತಾಲೂಕಿನ ಅತ್ಯಂತ ಹಿಂದುಳಿದಸ್ಥಳಅದರಲ್ಲೂ ಗೌಳಾದೇವಿ ಯ ಪುಣ್ಯ ಕ್ಷೆತ್ರ ಡಿಗ್ಗಿಯ ಅಸುಳ್ಳಿ ಗೆ ಬಂದು ದೇವಿಯ ದರ್ಶನ ಪಡೆಯುತ್ತಾರೆ, ರಮೇಶ ತವಡ್ಕರ್ ಅವರು. ಹೀಗಾಗಿ ಅವರ ಬಗ್ಗೆ ತಾಲೂಕಿನ ಜನತೆಗೆ ಅಪಾರ ಅಭಿಮಾನ ವಿದೆ. ಅವರಿಂದ ಕುಣುಬಿ ಜನರು ಎಸ್ ಟಿ ಗೆ ಸೇರಲು ಅನುಕೂಲ ವಾಗಲಿ ಎಂಬ ಆಶಾಕಿರಣ ವೂ ಇದೆ ತಾಲೂಕಿನಲ್ಲಿ ಹಲವಾರು ಸ್ಥಳಗಳು ಅತ್ಯಂತ ಪ್ರೇಕ್ಷಣಿಯ ಸ್ಥಳಗಳಾಗಿದ್ದು, ತಾಲೂಕು ಪ್ರವಾಸೋದ್ಯಮ ದಲ್ಲಿ ಸಾಕಷ್ಟು ಮುಂದುವರಿ ಯುತ್ತಿದೆ, ಸುಪಾ ಡ್ಯಾಮ್, ಹಿಂನ್ನೀರಿನ ಪ್ರದೇಶ, ಉಳವಿ ಕ್ಷೆತ್ರ, ಸಿಂತೇರಿ ರಾಕ್ಸ, ಕ್ಯಾಸಲ್ ರಾಕ್, ದೂದ್ ಸಾಗರ್, ಕಂಚಿ ಕಲ್ಲು ಕೆನೊಪಿ ವಾಕ್, ಹನಿ ಪಾರ್ಕ್, ವಿಜಲಿಂಗ್ ವುಡ್, ರೆಸಾರ್ಟ್ ಗಳು, ಅಣಶಿ ಯ ಕಾಳಿ ಹುಲಿ ಪಾರ್ಕ್, ಆನೆ ಸಪಾರಿ ಇವು ಗಳೆಲ್ಲವೂ ತಾಲೂಕಿನ ಹೆಮ್ಮೆ ಯನ್ನು ಹೆಚ್ಚಿಸಿವೆ.