ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆ ಈಗ ಯಾವ ಭೌಗೋಳಿಕ ಪ್ರದೇಶವನ್ನು ಹೊಂದಿಕೊಂಡಿದೆಯೋ ಅದೇ ರೀತಿಯಲ್ಲಿ ಮುಂದುವರೆಯುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಈಗಾಗಲೇ ಉತ್ತರ ಕನ್ನಡ ಜಿಲ್ಲೆಗೆ ಎರಡು ಜಿಲ್ಲೆಯಾಗ ಬೇಕು ಎಂಬ ಬೇಡಿಕೆ ಇದೆ. ಅದರ ಮಧ್ಯ ದಲ್ಲಿ ಸಾಗರವನ್ನು ಜಿಲ್ಲೆಯನ್ನಾಗಿ ಮಾಡಿ ಅದಕ್ಕೆ ಸಿದ್ದಾಪುರ ಹಾಗೂ ಬನವಾಸಿಯನ್ನು ಸೇರಿಸುತ್ತೇವೆ ಎಂಬ ಹೇಳಿಕೆ ಜನರ ಮಧ್ಯದಲ್ಲಿ ಗೊಂದಲ ಮೂಡಿಸುವುದಕ್ಕೆ ಹೇಳಿರುವುದಾಗಿ ಕಾಣುತ್ತದೆ.ಇದರಲ್ಲಿ ಯಾವುದೇ ಸತ್ಯಾಸತ್ಯತೆಗಳು ಇವೆ ಎಂದು ಭಾವಿಸುವುದಿಲ್ಲ.
ಶಿರಸಿ ಜಿಲ್ಲೆಯಾಗಬೇಕು ಎಂಬ ಬೇಡಿಕೆಗಳು ಕಾಲಕಾಲಕ್ಕೆ ವ್ಯಕ್ತವಾಗುತ್ತಿದೆ. ಜನರ ಭಾವನೆಗಳಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ. ಸಾಗರವನ್ನು ಉತ್ತರ ಕನ್ನಡಕ್ಕೆ ಅಥವಾ ಸಿದ್ದಾಪುರವನ್ನು ಸಾಗರಕ್ಕೆ ಸೇರಿಸುವುದು ಏಕಪಕ್ಷೀಯವಾಗಿ ಹೇಳಿಕೊಳ್ಳಬಹುದೇ ವಿನಃ ಯಾವುದೇ ಚರ್ಚೆ ಸಮಾಲೋಚನೆಗಳು ಆಗಲಿಲ್ಲ. ಹಾಗಾಗಿ ಇಂತಹ ಹೇಳಿಕೆಗಳಿಂದ ಜನರು ಗೊಂದಲಕ್ಕೀಡಾಗಬಾರದು ಎಂದರು.
ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಶಿರಸಿ ಕುಮಟಾ ಹಾಗೂ ಶಿರಸಿ ಹುಬ್ಬಳ್ಳಿ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದೂ ಹೇಳಿದರು.