ಸುದ್ದಿ ಕನ್ನಡ ವಾರ್ತೆ
ಹಳಿಯಾಳ :ತಾಲೂಕಿನ ಪ್ರತಿಷ್ಠಿತ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ( ಮಾರ್ಕೆಟಿಂಗ್ ಸೊಸೈಟಿಗೆ )ಸೆಪ್ಟೆಂಬರ್ 21 ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಅಭ್ಯರ್ಥಿಗಳು ಮಾಜಿ ವಿಧಾನ ಪರಿಷತ್ ಸದಸ್ಯರು, ಸಹಕಾರ ರಂಗದ ಹಿರಿಯ ನಾಯಕರು ಎಸ್.ಎಲ್.ಘೋಟ್ನೇಕರ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ನಗರದ ನಾಗನಾಥ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದರ್ಶನ ಪಡೆದುಕೊಂಡರು.
ಸಾಮಾನ್ಯ ಕ್ಷೇತ್ರಕ್ಕೆ ಬಿಜೆಪಿ ಯುವ ನಾಯಕರಾದ ಶ್ರೀನಿವಾಸ ಘೋಟ್ನೇಕರ, ಮೇಘನಾಥ ಪಾಟೀಲ್, ಶಿವಾಜಿ ಶಿಂಧೆ, ಅ ವರ್ಗಕ್ಕೆ ಅಶ್ಫಾಕ್ ಅಹ್ಮದ್ ಪುಂಗಿ, ಪರಿಶಿಷ್ಟ ಜಾತಿ ವರ್ಗಕ್ಕೆ ಪ್ರಕಾಶ ಕೊರವರ, ಮಹಿಳಾ ವರ್ಗಕ್ಕೆ ಜ್ಯೋತಿ ಗರಗ ಹಾಗೂ ನಿರ್ಮಲಾ ಪಾಟೀಲ್ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ, ವಿಶೇಷ ಆಹ್ವಾನಿತರಾದ ಅನಿಲ್ ಮುತ್ನಾಳೆ, ಪ್ರಮುಖರಾದ ಶಿವದೇವ ದೇಸಾಯಿ, ನಾಗರಾಜ ಪಾಟೀಲ್, ವಿಜಯ ಬೋಬಾಟಿ, ಆನಂದ ಕಂಚನಾಳಕರ, ಅಶೋಕ ಬೆಳಗಾಂವಕರ, ವಾಮನ ಮಿರಾಶಿ, ಮಾರುತಿ ಕಾಮ್ರೇಕರ, ಕುಮಾರ ಕಲಭಾವಿ, ವಾಸುದೇವ ಪೂಜಾರಿ, ನಾಗರಾಜ ಬಾಂದೇಕರ, ಸಿದ್ದು ಶೆಟ್ಟಿ, ಆಕಾಶ ಉಪ್ಪಿನ, ಫಯಾಜ್ ಶೇಖ್, ರಮೇಶ ಶೆಟ್ಟಿ, ಮೊದಲಾದವರು ಇದ್ದರು.