ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಯಕ್ಷಗಾನ ಪ್ರೇಮಿಗಳೇ ನಿಮಗಿದೋ ಸಂತಸದ ಸುದ್ಧಿ…ಅಕ್ಟೋಬರ್ 31 ರಿಂದ ನವೆಂಬರ್ 4 ರವರೆಗೆ ಸಂಜೆ 4.30 ರಿಂದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಗಾಂಧೀಕುಟಿರದಲ್ಲಿ 39 ನೇಯ ಸಂಕಲ್ಪ ಉತ್ಸವ-2025 ರ ವಿವಿಧ ಕಾರ್ಯಕ್ರಮಗಳು ಜರುಗಲಿದೆ.

ಸಂಕಲ್ಪ ಉತ್ಸವ ಎಂದರೆ ಯಕ್ಷಗಾನ ಪ್ರೇಮಿಗಳಿಗೊಂದು ಹಬ್ಬವೇ ಸರಿ. ಪ್ರತಿದಿನ ಯಕ್ಷಗಾನ ಪ್ರದರ್ಶನ ಈ ಸಂಕಲ್ಪ ಉತ್ಸವದ ಪ್ರಮುಖ ಆಕರ್ಷಣೆ ಎಂದರೂ ತಪ್ಪಾಗುವುದಿಲ್ಲ. ಯಕ್ಷಗಾನ ಮಾತ್ರವಲ್ಲದೆಯೇ ವಿವಿಧ ಕಾರ್ಯಕ್ರಮಗಳೂ ಈ ಹಬ್ಬದ ಪ್ರಮುಖ ಭಾಗವೇ ಆಗಿದೆ.

ಅಕ್ಟೋಬರ್ 31 ರಂದು ಬಬ್ರುವಾಹನ ಯಕ್ಷಗಾನ ಪ್ರದರ್ಶನ, ನವೆಂಬರ್ 1 ರಂದು ಗಧಾಯುದ್ಧ ಯಕ್ಷಗಾನ, ನವೆಂಬರ್ 2 ರಂದು ಕವಿರತ್ನ ಕಾಳಿದಾಸ ಯಕ್ಷಗಾನ, ನವೆಂಬರ್ 3 ರಂದು ದ್ರೌಪದಿ ಪ್ರತಾಪ ಯಕ್ಷಗಾನ, ನವೆಂಬರ್ 4 ರಂದು ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ ಹೆಗಡೆ, ಉಪಾಧ್ಯಕ್ಷರಾದ ಪ್ರಶಾಂತ ಹೆಗಡೆ, ಸಂಚಾಲಕರಾದ ಪ್ರಸಾದ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಕಲ್ಪ ಉತ್ಸವಕ್ಕೆ ನೀವು ಬನ್ನಿ…ನಿಮ್ಮವರನ್ನೂ ಕರೆತನ್ನಿ