ಸುದ್ಧಿಕನ್ನಡ ವಾರ್ತೆ
ನವದೆಹಲಿ: ಭಾರತದ 15 ನೇಯ ಉಪರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ರವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರರಾಜಧಾನಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ರೌಪದಿ ಮುರ್ಮು ರವರು ಉಪರಾಷ್ಟ್ರಪತಿಗಳಾಗಿ ರಾಧಾಕೃಷ್ಣನ್ ರವರಿಗೆ ಪ್ರಮಾಣವಚನ ಬೋಧಿಸಿದರು.

ಉಪರಾಷ್ಟ್ರಪತಿಗಳಾಗಿದ್ದ ಜಗದೀಪ ಧನಕರ್ ರವರ ರಾಜೀನಾಮೆಯ ನಂತರ ತೆರವಾಗಿದ್ದ ಈ ಸ್ಥಾನಕ್ಕೆ ಸಪ್ಟೆಂಬರ್ 9 ರಂದು ಚುನಾವಣೆ ನಡೆದಿತ್ತು. ಆಡಳಿತ ಪಕ್ಷವಾದ ಎನ್ ಡಿಎ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣನ್ ರವರು ವಿರೋಧ ಪಕ್ಷದ ಒಮ್ಮತದ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ರವರನ್ನು ಸೋಲಿಸಿದ್ದರು.

ರಾಧಾಕೃಷ್ಣನ್ ರವರು 452 ಮತಗಳನ್ನು ಪಡೆದಿದ್ದರು. ಸುದರ್ಶನ ರೆಡ್ಡಿ ರವರು 300 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.