ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಶಿರಸಿ ತಾಲೂಕಿನ ಬೆಣ್ಣೆಹೊಳೆ ಜಲಪಾತದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಅರಣ್ಯ ಮಹಾವಿದ್ಯಾಲಯ ವಿಧ್ಯಾರ್ಥಿ ರಾಹುಲ ನಾಯಕ ಮೃತ ದೇಹ ಪತ್ತೆಯಾಗಿದ್ದು,ಈತನ ಶೋಧ ಕಾರ್ಯದಲ್ಲಿ ಜೋಯಿಡಾ ತಾಲೂಕಿನ ಇಳವಾದ ಪ್ಲೈಯ್ಯ ಕ್ಯಾಚರ್ ಅಡ್ವೆಂಚರ್ ಹೋಮ್ ಸ್ಟೇಯ ಮುಳುಗು ತಜ್ಞರು,ಈಜುಗಾರರ ತಂಡದ ಸದಸ್ಯರುಗಳು ಹಗಲಿರುಳು ಶ್ರಮಿಸಿ ಮೃತ ವಿಧ್ಯಾರ್ಥಿ ವಿಜಯಪುರ ಜಿಲ್ಲೆಯ ರಾಹುಲ ನಾಯಕನ ಮೃತ ದೇಹ ಪತ್ತೆ ಹಚ್ಚಿದ್ದು,ಮೃತ ವಿಧ್ಯಾರ್ಥಿಯ ಕುಟುಂಬದವರು ಶೋಧ ಕಾರ್ಯ ತಂಡಕ್ಕೆ ಅಭಿನಂದನೆ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ.

 

ಶಿರಸಿ ತಾಲೂಕಿನ ಬೆಣ್ಣೆಹೊಳೆ ಜಲಪಾತಕ್ಕೆ ಪ್ರವಾಸಕ್ಕೆಂದು ಹೋಗಿದ್ದ ನಾಲ್ಕು ವಿಧ್ಯಾರ್ಥಿಗಳ ಪೈಕಿ ನೀರಿನಲ್ಲಿ ಬಿದ್ದ ಇಬ್ಬರಲ್ಲಿ ಓರ್ವ ಬಂಡೆಗಳ ನಡುವೆ ಬೆನ್ನು ಮೂಳೆ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಾಹುಲ ನಾಯಕ ನಾಪತ್ತೆಯಾಗಿದ್ದ. ಗೋಪಾಲ ಗೌಡ ನೇತೃತ್ವದ ಶೋಧ ತಂಡ, ಉಡುಪಿಯ ಈಜು ತಜ್ಞ ಈಶ್ವರ ಮಲ್ಪೆ, ಪ್ಲೈಯ್ಯ ಕ್ಯಾಚರ್ ಅಡ್ವೆಂಚರ್ ಹೋಮ್ ಸ್ಟೇಯ ತಂಡದ ರಾಕೇಶ,ರವಿ,ಹನೀಫ್, ಪಾರುಕ್,ಸ್ಥಳೀಯ ಪೊಲೀಸ ಇಲಾಖೆಯವರು,ಅಗ್ನಿಶಾಮಕ ದಳದವರು,ಕಂದಾಯ ಇಲಾಖೆ,ಅರಣ್ಯ ಇಲಾಖೆಯವರು, ಸ್ಥಳೀಯರು ಶೋಧ ಕಾರ್ಯದಲ್ಲಿ ಸಹಕಾರ ನೀಡಿದರು.