ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಸರಕಾರಿ ಪ್ರೌಢಶಾಲೆ ಕ್ಯಾಸಲ್ ರಾಕ್ ನಲ್ಲಿ ನಡೆದ 2025 -26 ನೇ ಸಾಲಿನ ಪ್ರೌಢಶಾಲಾ ವಿಭಾಗದ ಜೋಯಿಡಾ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಜಗಲಬೇಟನ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಆಟವಾಡಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಹಾಗೂ ಬಾಲಕರ ವೈಯುಕ್ತಿಕ ವೀರಾಗ್ರಣಿ ಪ್ರಶಸ್ತಿ ಮತ್ತು ಬಾಲಕಿಯರ ವೈಯುಕ್ತಿಕ ವೀರಾಗ್ರಣಿ ಪ್ರಶಸ್ತಿ ಸಹ ನಮ್ಮ ಶಾಲೆಗೆ ದೊರೆತಿರುವುದು ಅತ್ಯಂತ ಖುಷಿಯಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಕಲ್ಪನಾ ಶೇಟ್,ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ ಬಿ ಮರಾಠೆ, ಸಹ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ವೈಯುಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಆದಿತ್ಯ ಗಾವಡ 200 ಮೀಟರ್ ಓಟ ತೃತೀಯ,ಪ್ರಸಾದ ಠಾಕೂರ್ 800 ಮೀಟರ್ ಓಟ ದ್ವಿತೀಯ,ಬೀರು ಎಡಗೆ ಹ್ಯಾಮರ್ ಥ್ರೋ ಪ್ರಥಮ,ಹನುಮಂತ ಪಾಟೀಲ ಹ್ಯಾಮರ್ ಥ್ರೋ ತೃತೀಯ, ವಿಘ್ನೇಶ ಮಿರಾಶಿ 1,500 ಮೀಟರ್ ಓಟ ತೃತೀಯ ಸಂಕೇತ ದೇಸಾಯಿ 3000 ಮೀಟರ್ ಓಟ ತೃತೀಯ, ಪ್ರಸಾದ ಗಾವಡೆ ಗುಂಡು ಎಸೆತ ಪ್ರಥಮ,ಚಕ್ರ ಎಸೆತ ಪ್ರಥಮ, ಜಾವಲಿನ್ ಥ್ರೋ ದ್ವಿತೀಯ ಸ್ಥಾನಗಳನ್ನು ಪಡೆದು ಬಾಲಕರ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿರುತ್ತಾನೆ.

ರಿಯಾ ಶಿರೋಡ್ಕರ್ ಚಕ್ರ ಎಸೆತ ತೃತೀಯ, ಚೆಸ್ ನಲ್ಲಿ ದ್ವಿತೀಯ,ಸುಷ್ಮಾ ಮಿರಾಶಿ 800 ಮೀಟರ್ ಓಟ ತೃತೀಯ, ಸಲೋನಿ ಕಾಪೋಲಕರ ಎತ್ತರ ಜಿಗಿತ ತೃತೀಯ, ಸರಗಂ ಗೋಜಾರೆ100 ಮೀಟರ್ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ಪ್ರಥಮ ಸ್ಥಾನಗಳನ್ನು ಪಡೆದು ಬಾಲಕಿಯರ ವಿಭಾಗದ ವೈಯುಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿರುತ್ತಾರೆ.

ಗುಂಪು ಆಟಗಳಲ್ಲಿಬಾಲಕರ ವಾಲಿಬಾಲ್ ಪ್ರಥಮ ಬಾಲಕಿಯರ ವಾಲಿಬಾಲ್ ಪ್ರಥಮ,ಬಾಲಕರ ಖೋ ಖೋ ಪ್ರಥಮ,ಬಾಲಕಿಯರ ಕಬಡ್ಡಿ ದ್ವಿತೀಯ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದ ಎಲ್ಲಾ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಪ್ರಶಾಂತ ಬಿ ಮರಾಠೆ ಅವರಿಗೆ ಶಾಲೆಯ ಮುಖ್ಯಾಧ್ಯಾಪಕರು, ಸಹ ಶಿಕ್ಷಕ ವೃಂದ, ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಪಾಲಕ ಪೋಷಕರು,ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದವರು ಮತ್ತು ಇತರರು ಅಭಿನಂದಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿರುತ್ತಾರೆ.