ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕ್ಯಾಸಲ್ ರಾಕ್ ನಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ ಹಾಗೂ ಸರಕಾರಿ ಪ್ರೌಢಶಾಲೆ ಕ್ಯಾಸಲ್ ರಾಕ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜೋಯಿಡಾ ತಾಲೂಕಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ 2025 – 2026 ರ 17 ವರ್ಷ ವಯೋಮಿತಿಯೊಳಗಿನ ಗುಂಪು ಸ್ಪರ್ಧೆಯಲ್ಲಿ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಲಕರ ಕಬಡ್ಡಿ ತಂಡವು ಸತತವಾಗಿ ನಾಲ್ಕನೇಯ ಬಾರಿ ತಾಲೂಕಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಾಲಕರ ವೈಯುಕ್ತಿಕ ವಿಭಾಗದ 800ಮೀ ಓಟದ ಸ್ಪರ್ಧೆಯಲ್ಲಿ ದರ್ಶನ ವೇಳಿಪ ಪ್ರಥಮ,ಬಸವರಾಜ ಸಣ್ಣವಡ್ಡಿನ 5 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ,4× 100 ಮೀ ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವೈಯುಕ್ತಿಕ ವಿಭಾಗದಲ್ಲಿ ಅಪರ್ಣಾ ವೇಳಿಪ 100 ಮೀ ಓಟದಲ್ಲಿ ದ್ವಿತೀಯ,ಸಂಜಯ ಕುಂಬಗಾಳಕರ200 ಮೀ ಓಟದಲ್ಲಿ ಪ್ರಥಮ,ಚೈತ್ರಾ ದಾತೋಡಕರ 3000 ಮೀ ಓಟದಲ್ಲಿ ಪ್ರಥಮ ಸ್ಥಾನ,ವೀಣಾ ಕಣ್ಣೇಕರ ಗುಂಡು ಎಸತೆದಲ್ಲಿ ದ್ವಿತೀಯ,4× 100 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ವಸತಿ ಶಾಲೆಯ ಪ್ರಾಂಶುಪಾಲರಾದ ಗಿರೀಶಕುಮಾರ ಹಿರೇಮಠ ದೈಹಿಕ ಶಿಕ್ಷಣ ಶಿಕ್ಷಕರಾದ ವೀರೇಶ ನಿಡವಣಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.