ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ರಾಜ್ಯ ಸರಕಾರದ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಗದ್ದಾ ಸೇವಾ ಸಹಕಾರಿ ಸಂಘ. ಯರಮುಖ ದಲ್ಲಿ ಬುಧವಾರ ಮದ್ಯಾಹ್ನ ನಡೆಯಿತು. ಕಾರ್ಯಕ್ರಮ ದಲ್ಲಿ, ವಿವಿಧ ತಜ್ಞರುಗಳು, ಮಾಹಿತಿ ನೀಡುತ್ತಾ, ಸಾವಯವ ಕೃಷಿ ಎಂದರೇನು, ಸಾವಯವ ಕೃಷಿಯ ಮಹತ್ವ ಸಾವಯವ ಉತ್ಪನ್ನ ಗಳಿಗೆ ಉತ್ತಮ ಬೆಲೆ, ಮಾರುಕಟ್ಟೆ ಮಾಹಿತಿ, ಸಾವಯವ ಪ್ರಮಾಣಿಕರಣ, ಸಾವಯವ ಮೂಲದ ಗೊಬ್ಬರ, ಪೀಡೆ ನಾಶಕ ಗಳು, ರಾಸಾಯನಿಕ ಗೊಬ್ಬರ ಬಳಕೆಯ ದುಷ್ಪರಿಣಾಮ, ಮಣ್ಣು ಪರೀಕ್ಷೆ ಸೇರಿದಂತೆ ವಿವಿಧ ಅರಿವು ಮೂಡಿಸುವ ಮಾಹಿತಿ ನೀಡಿದರು.
ಈ ಮಾಹಿತಿ ಗಳ ಸಂಪನ್ಮೂಲ ವ್ಯಕ್ತಿ ಗಳಾಗಿ, ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಬಿಡಿಕರ್ ಮಲ್ಲೇಶಪ್ಪ ಮದನ್ ಮೋಹನ್ ಮತ್ತು ಕೃಷಿ ತಜ್ಞರು, ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುವಲ್ಲಿ ಸಹಕರಿಸಿದರು . ತಾಲೂಕಿನ ಹಲವಾರು ರೈತರು ಭಾಗವಸಿದ ಕಾರ್ಯಕ್ರಮ ದಲ್ಲಿ ನಂದಿಗದ್ದಾ ಗ್ರಾಮ ಪಂಚಾಯತ ಅಧ್ಯಕ್ಷ ರಾದ ಅರುಣ ದೇಸಾಯಿ, ಸಹಕಾರಿ ಸಂಘದ ಅಧ್ಯಕ್ಷ, ರಾಮಕೃಷ್ಣ ದಾನಗೇರಿ, ಗ್ರಾಮ ಪಂಚಾಯತ್ ಸದಸ್ಯ ಧವಳೋ ಸಾವರ್ಕರ್ ಮಾತನಾಡಿದರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಕನ್ಯಾ ದೇಸಾಯಿ ತಾಲೂಕಾ ಕೃಷಿ ಸಮಾಜದ ಅಧ್ಯಕ್ಷ ರಾಮಚಂದ್ರ ಹೆಗಡೆ ಸಹಕಾರಿ ಸಂಘದ ನಿರ್ದೇಶಕರು, ಊರಿನ ಹಿರಿಯ ರೈತ ಪ್ರತಿನಿದಿಗಳು, ರೈತರು ಭಾಗವಹಿಸಿ, ಮಾಹಿತಿ ಪಡೆದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ವೀಣಾ ಭೀಡಿಕರ ನಂದಿಗದ್ದಾ ಗ್ರಾಮ ಪಂಚಾಯತ ಮತ್ತು ಸಹಕಾರಿ ಸಂಘ ದವರು ಉತ್ತಮ ತಯಾರಿ ಮಾಡಿಕೊಟ್ಟರು.