ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಸಹೃದಯಿ ವೈದಿಕರು, ಊರಿನ ಹಿರಿಯರು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದ ಬಸ್ ಸ್ಟ್ಯಾಂಡ್ ಪಕ್ಕದ ಚೌಡೇಶ್ವರಿ ದೇವಸ್ಥಾನ ದಲ್ಲಿ ಕಳೆದ ಹಲವು ವರ್ಷಗಳಿಂದ ಪೂಜೆ ಮಾಡುತ್ತ ಬಂದವರು ಶ್ರೀ ಶಂಕರ ಭಟ್ಟ, ಮೂಡೇಬೈಲ್ ಇವರು ಇಂದು ಸಂಜೆ ಅವರ ತೋಟದಲ್ಲಿ ಹಾವು ಕಚ್ಚಿ ದಿವಂಗತರಾದ ವಿಷಯ ಅತ್ಯಂತ ಬೇಸರದ್ದಾಗಿದೆ.

ದಿವಂಗತರು, ಬಡವ,ಬಲ್ಲಿದರೆನ್ನದೆ ಎಲ್ಲರನ್ನೂ ಬಹಳ ಪ್ರೀತಿಯಿಂದ ಕಾಣುವ ವಿಶೇಷ ವ್ಯಕ್ತಿಯಾಗಿದ್ದರು. ಅವರ ಅಗಲುವಿಕೆ ನಿಜಕ್ಕೂ ದು:ಖದಾಯಕ ಸಂಗತಿ. ಭಗವಂತ ಅವರಿಗೆ ಸದ್ಗತಿಯನ್ನು ನೀಡಲಿ. ಕುಟುಂಬಕ್ಕೆ ಅವರ ವಿಯೋಗದ ದು:ಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.