ಸುದ್ದಿ ಕನ್ನಡ ವಾರ್ತೆ

ಹಳಿಯಾಳ: ಮಂಗಳವಾಡ ಮೂಲದ ಶ್ರೀ ಗಿರೀಶ್ ಕದಂ (ಇಂಜಿನಿಯರ್ ಮುಂಬೈ) ಕುಟುಂಬದವರು ಸತತ 5 ವರ್ಷಗಳಿಂದ SSLC top10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸುತ್ತಿದ್ದು, ಈ ವರ್ಷ ಸುಮಾರು 12000=00 ರೂಪಾಯಿಗಳ ಪ್ರೋತ್ಸಾಹಕ ಬಹುಮಾನವನ್ನು 11 ವಿದ್ಯಾರ್ಥಿಗಳಿಗೆ ನೀಡಿರುತ್ತಾರೆ.

ಶ್ರೀ ಗಿರೀಶ್ ಕದಂ ಅವರು ಮಾತನಾಡಿ, 2024-25 ನೇ ಸಾಲಿನ SSLC ಫಲಿತಾಂಶ ದಲ್ಲಿ ತಾಲೂಕಿನಲ್ಲಿಯೇ ಪ್ರಥಮ ಸ್ಥಾನದ ಫಲಿತಾಂಶ (95.45%, A grade) ನೀಡಿದ
ಮಂಗಳವಾಡ ಪ್ರೌಢಶಾಲೆಯ ಕಾರ್ಯಚಟುವಟಿಕೆ ಹಾಗೂ ಸಂಸ್ಕಾರಯುತ ಬೋಧನೆಯ ಮೇಲೆ ಅತ್ಯಂತ ಗೌರವವನ್ನು ಹೊಂದಿರುವುದಾಗಿ ಹರ್ಷ ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ರಾಜೇಶ್ವರಿ ನಾಯಕ್ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ ಕುಟುಂಬ ಸಮೇತ ಆಗಮಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿ ಕೊಡುತ್ತಿರುವ ಈ ಕುಟುಂಬಕ್ಕೆ ಶ್ರೀ ಗುರುವಿನ ಆಶೀರ್ವಾದವಿರಲಿ ಎಂದು
ಪ್ರಾರ್ಥಿಸಿದರು.

ಸಹ ಶಿಕ್ಷಕರಾದ ಶ್ರೀ ಜನಾರ್ಧನ ಮಡಿವಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆಯ ಹಲವು ಕ್ಷೇತ್ರಗಳಲ್ಲಿನ ಸಾಧನೆಯ ಪರಿಚಯ ಮಾಡಿಸಿ, ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವ ಇಂತಹ ದಾನಿಗಳ ಸಂತತಿ ಸಾವಿರವಾಗಲಿ, ವಿದ್ಯಾರ್ಥಿಗಳ ಸಾಧನೆ ಶಿಖರದಷ್ಟಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಗಿರೀಶ್ ಕದಂ ಅವರ ಕುಟುಂಬದ ಆಪ್ತರು, ಸದಸ್ಯರಾದ ಶ್ರೀ ನಾಮದೇವ ಘಾಡಿ, ಸಹ ಶಿಕ್ಷಕಿಯರಾದ ಶ್ರೀಮತಿ ವಂದನಾ ನಾಯಕ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಶ್ರೀಮತಿ ದೀಪಾ ಗಿರೀಶ್ ಕದಂ ಅವರು ಸುಶ್ರಾವ್ಯವಾದ ಗಣೇಶನ ಪ್ರಾರ್ಥನೆಯ ಮೂಲಕ ವಿದ್ಯಾರ್ಥಿಗಳಿಗೆ ಶುಭ ಕೋರಿದರು