ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ರಾಯಬಂದರ ನಿಂದ ಚೋಡಣ ದ್ವೀಪಕ್ಕೆ ಮಾಂಡವಿ ನದಿಯಲ್ಲಿ ಓಡಾಟ ನಡೆಸುವ ರೊರೊ ಫೆರಿ ನದಿ ಮಧ್ಯದಲ್ಲಿ ಬಂದ್ ಆಗಿ ಪ್ರಯಾಣಿಕರು ಸುಮಾರು ಎರಡೂವರೆ ತಾಸು ಸಿಲುಕಿಕೊಂಡಿದ್ದ ಘಟನೆ ನಡೆದಿದೆ. ನದಿಯಲ್ಲಿ ರೋರೋ ಫೇರಿ ಹೋಗುತ್ತಿರುವ ಬೋಟ್ ನ ಪಂಕಕ್ಕೆ ಬಲೆ ಸಿಲುಕಿಕೊಂಡಿದ್ದರಿಂದ ಬೋಟ್ ನದಿ ಮಧ್ಯದಲ್ಲಿ ಸಿಲುಕಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರೋರೋ ಬೋಟ್ ಪಂಕಕ್ಕೆ ಸಿಲುಕಿಕೊಂಡಿದ್ದ ಬಲೆಯನ್ನು ತೆರವುಗೊಳಿಸಿದ ನಂತರ ಬೋಟ್ ಮತ್ತೆ ಓಡಾಟ ಆರಂಭಿಸಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಈ ಜಲಮಾರ್ಗಕ್ಕೆ ಹಳೇಯ ಫೆರಿ ಬೋಟ್ ನ್ನು ತೆರವುಗೊಳಿಸಿ ಈ ಹೊಸ ರೋರೋ ಫೆರಿಬೋಟ್ ಆರಂಭಿಸಲಾಗಿದೆ. ರೋರೋ ಫೇರಿ ಬೋಟ್ ಗೆ ಸ್ಥಳೀಯರಿಂದ ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಫೆರಿಬೋಟ್ ಪಂಕಕ್ಕೆ ಬಲೆ ಸಿಲುಕಿಕೊಂಡಿದ್ದರಿಂದ ಮಾಂಡವಿ ನದಿ ಮಧ್ಯಭಾಗದಲ್ಲಿ ಇದ್ದಕ್ಕಿದ್ದಂತೆಯೇ ರೋರೋ ಬೋಟ್ ನಿಂತಿದ್ದರಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು, ಸುಮಾರು ಎರಡೂವರೆ ತಾಸುಗಳ ಕಾಲ ರೋರೋ ಫೇರಿಬೋಟ್ ಮಾಂಡವಿ ನದಿಯಲ್ಲಿಯೇ ಸಿಲುಕಿಕೊಂಡಿತ್ತು.
ಕಳೆದೆ ಕೆಲ ತಿಂಗಳ ಹಿಂದೆ ಇದೇ ಜಲಮಾರ್ಗದಲ್ಲಿ ಓಡಾಟ ನಡೆಸುತ್ತಿದ್ದ ಹಳೇದ ಫೇರಿಬೋಟ್ ನದಿಯಲ್ಲಿ ಮುಳುಗಿತ್ತು. ಇಂತಹದ್ದೇ ಘಟನೆ ಮತ್ತೆ ಗೋವಾದಲ್ಲಿ ಮರುಕಳಿಸಿತ್ತು. ಇದೀಗ ಇತ್ತೀಚೆಗಷ್ಟೇ ಆರಂಭಿಸಿರುವ ರೋರೋ ಬೋಟ್ ನದಿಯಲ್ಲಿ ಸಿಲುಕಿಕೊಂಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.

 


The Roro ferry plying from Goa’s Raibandar to Chodana Island in the Mandavi River was blocked in the middle of the river and the passengers were stuck for about two and a half hours. It has been reported that the boat got stuck in the middle of the river as the net got stuck in the propeller of the boat which was going on a roro ferry in the river.