ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ಸಾವಯವ ತಾಲೂಕನ್ನಾಗಿ ಪರಿವರ್ತಿಸುವ ಕುರಿತು ಗ್ರಾಮ ಪಂಚಾಯತ ಮಟ್ಟದಲ್ಲಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು
ದಿನಾಂಕ:10-9-2025 ರಂದು ಬುಧವಾರ ಮದ್ಯಾಹ್ನ 2-30 ಕ್ಕೆ ನಂದಿಗದ್ದಾ ಸೇವಾ ಸಹಕಾರಿ ಸಂಘ, ಯರಮುಖದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾವಯವ ಕೖಷಿ ಮಹತ್ವ,ರೈತರ ಸಾವಯವ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆ ಮಾಹಿತಿ,ಸಾವಯವ ಪ್ರಮಾಣಿಕರಣ, ಸಾವಯವ ಮೂಲದ ಗೊಬ್ಬರಗಳು ಮತ್ತು ಪೀಡೆನಾಶಕಗಳ ತಯಾರಿಕೆ ಮಾಹಿತಿ, ಕೖಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ,
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಂಕರ ಹೆಗಡೆ ನಿವೃತ್ತ ಕೃಷಿ ನಿರ್ದೇಶಕರು ಶಿರಸಿ ಮತ್ತು ಮಲ್ಲೇಶಪ್ಪ ಬಿಸಿರೊಟ್ಟಿ,ಅಮೇರಿಕಾ ದೇಶಕ್ಕೆ ಸಾವಯವ ಕೆಂಪು ಮೆಣಸಿನಪುಡಿ ರಫ್ತು ಮಾಡುತ್ತಿರುವ ಪ್ರಗತಿಪರ ರೈತರು. ಕುಂದಗೋಳ ಭಾಗವಹಿಸಲ್ಲಿದ್ದಾರೆ, ಹಾಗೂ
ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ ಮತ್ತು ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.