ಸುದ್ಧಿಕನ್ನಡ ವಾರ್ತೆ
ಗೋವಾಕ್ಕೆ ಬಂದು ಪ್ರವಾಸಿಗರು ಮೋಜುಮಸ್ತಿ ನಡೆಸಿ ಹೆಚ್ಚಿನ ದಂಡ ತೆತ್ತು ಶಿಕ್ಷೆ ಅನುಭವಿಸಿದ ಘಟನೆಗಳು ಎಷ್ಟೋ ಇವೆ. ಹೀಗಿದ್ದರೂ ಕೂಡ ಇದೀಗ ಗೋವಾಕ್ಕೆ ಬಂದ ಪ್ರವಾಸಿಗನೋರ್ವ ಕಾರನ್ನು ಬೀಚ್ ಗೆ ತೆಗೆದುಕೊಂಡು ಹೋಗಿ ಸಮುದ್ರದ ನೀರಿನಲ್ಲಿ ಕಾರು ಸಿಲುಕಿಕೊಂಡ ಘಟನೆ ನಡೆದಿದೆ.
ಗೋವಾದ ಸಮುದ್ರ ತೀರದಲ್ಲಿ ಪ್ರವಾಸಿಗರ ಬೇಜವಾಬ್ದಾರಿ ಕೃತ್ಯದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಗೋವಾದ ಹಣಜುಣ ಸಮುದ್ರ ತೀರದಲ್ಲಿ ಪ್ರಾಸಿಗನೋರ್ವ 20 ದಿನಗಳ ಹಿಂದಷ್ಟೇ ಖರೀದಿಸಿದ್ದ ಕಿಯಾ ಕಾರನ್ನು ನೇರವಾಗಿ ಬೀಚ್ ನಲ್ಲಿ ಓಡಿಸಿ ನಂತರ ಸಮುದ್ರದ ನೀರಿಗೆ ಇಳಿದಿದ ಇದರಿಂದಾಗಿ ಕಾರು ಸಮುದ್ರದಲ್ಲಿ ಭಾಗಶಹ ಮುಳುಗಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ಪ್ರವಾಸಿಗನೋರ್ವ ತನ್ನ ಕಾರನ್ನು ಹಣಜುಣ ಸಮುದ್ರ ತೀರಕ್ಕೆ ತರುತ್ತಿದ್ದಾಗ ಅಲ್ಲಿದ್ದ ಲೈಫ್ ಗಾರ್ಡಗಳು ಎಷ್ಟೇ ಹೇಳಿದರೂ ಕೇಳದೆಯೇ ಸಮುದ್ರದ ನೀರಿಗೆ ತೆಗೆದುಕೊಂಡು ಹೋದ. ಇದರಿಂದಾಗಿ ಕಾರು ಸಮುದ್ರದಲ್ಲಿ ಭಾಗಶಹ ಮುಳುಗಿದ ಘಟನೆ ನಡೆದಿದೆ.
ಕಾರನ್ನು ಸಮುದ್ರದ ನೀರಿನಿಂದ ಹೊರಗೆ ತರಲು ಪ್ರಯತ್ನಿಸುವಾಗ ಸಮುದ್ರದ ಅಲೆ ಇನ್ನಷ್ಟು ಉಕ್ಕಲು ಆರಂಭಿಸಿತು. ಇದರಿಂದಾಗಿ ಕಾರು ಭಾಗಶಃ ಮುಳುಗಿತು. ಪ್ರವಾಸಿಗನು ತಾನು ಕಾರನ್ನು ಗೊತ್ತಿಲ್ಲದೆಯೇ ಬೀಚ್ ಗೆ ತೆಗೆದುಕೊಂಡು ಹೋದೆ ಎಂದು ಹೇಳಿಕೆ ನೀಡುತ್ತಿದ್ದ. ಆದರೆ ದೃಷ್ಠಿ ಲೈಫ್ ಗಾರ್ಡಗಳ ಪ್ರಕಾರ ಈತ ಗೊತ್ತಿದ್ದೂ ಕೂಡ ಹೇಳಿದರೂ ಕೇಳದೆಯೇ ಕಾರನ್ನು ಬೀಚ್ ಗೆ ತೆಗೆದುಕೊಂಡು ಬಂದ ಎಂಬ ಮಾಹಿತಿ ನೀಡಿದ್ದಾರೆ.