ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ-ಬೆಳಗಾವಿ ರಾಚ್ಟ್ರೀಯ ಹೆದ್ದಾರಿಯಲ್ಲಿನ ಖಾನಾಪುರ ದಿಂದ ಅನಮೋಡ ವರೆಗೆ ನಡೆಯುತ್ತಿರುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯಿಂದ ವಾಹನ ಸವಾರರಿಗೆ ಮತ್ತೆ ಹೆಚ್ಚಿನ ತೊಂದರೆ ಎದುರಾಗುವ ಸಾಧ್ಯತೆಯಿದೆ. ಈ ಮಾರ್ಗದಲ್ಲಿ ಹತ್ತಿ ಬ್ರಿಜ್ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದ್ದು ಇದಕ್ಕಾಗಿ ಈ ಮಾರ್ಗ ಎರಡೂವರೆ ತಿಂಗಳು ಬಂದ್ ಆಗುವ ಸಾಧ್ಯತೆಯಿದೆ. ಇದರಿಂದಾಗಿ ಗೋವಾ-ಬೆಳಗಾವಿ ಭಾಗಕ್ಕೆ ಪ್ರವಾಸ ಮಾಡುವ ವಾಹನ ಸವಾರರಿಗೆ ಮತ್ತೆ ತೊಂದರೆ ಎದುರಾಗಲಿದೆ.

ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಮೋಡನಲ್ಲಿ ಹತ್ತಿ ಬ್ರಿಜ್ ಕಾಮಗಾರಿ ಕಳೆದ ಅನೇಕ ದಿನಗಳಿಂದ ಸ್ಥಗಿತಗೊಂಡಿತ್ತು. ಈ ಸೇತುವೆಯ ಅಗಲವನ್ನು ಕೇವಲ 6 ಮೀಟರ್ ಮಾತ್ರ ಅಗಲ ಮಾಡುತ್ತಿರುವುದರಿಂದ ಹಲವು ಸಾಮಾಜಿಕ ಸಂಘಟನೆಗಳು ಇದಕ್ಕೆ ಆಕ್ಷೇಪವೆತ್ತಿದ್ದವು. ಈ ಸಂದರ್ಭದಲ್ಲಿ ಸೇತುವೆಯ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ವಿಭಾಗವು ಸೇತುವೆಯ ಅಗಲವನ್ನು 9 ಮೀಟರ್ ಅಗಲವನ್ನು ಮಾಡಲು ನಿರ್ಣಯ ತೆಗೆದುಕೊಂಡಿದೆ. ಇದರಿಂದಾಗಿ ಸೇತುವೆಯ ನಿರ್ಮಾಣ ಕಾಮಗಾರಿ ಪುನರಾರಂಭಗೊಳ್ಳಲಿದೆ.

ಕಳೆದ ಕೆಲ ದಿನಗಳಿಂದ ಗೋವಾ ಭಾಗದ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರಿಂದ ವಾಹನ ಸವಾರರಿಗೆ ಅನುಕೂಲವಾಗಿತ್ತು. ಆದರೆ ಇದೀಗ ಹತ್ತಿ ಬ್ರಿಜ್ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿರುವುದರಿಂದ ಇದೀಗ ಈ ಮಾರ್ಗ ಪುನಃ ಬಂದ್ ಆಗುವ ಸಾಧ್ಯತೆಯಿದ್ದು ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಎದುರಾಗಲಿದೆ.