ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ  ತಾಲೂಕಿನಲ್ಲಿ ಅಡಿಕೆ ಕೊಳೆ ರೋಗದ ಜೊತೆಗೆ ಕೋಕೋ ಗಿಡದ ಕಾಯಿ ಗಳೂ, ಕೊಳೆ ರೋಗಕ್ಕೆ ತುತ್ತಾಗಿವೆ, ಉತ್ತಮ ವಾಗಿ ಹೂ ಬಿಟ್ಟು ಕಾಯಿ ಕಟ್ಟಿದ ಮೇಲೆ ನಿದಾನವಾಗಿ ಕಾಯಿಗಳು ಕಂದು ಬಣ್ಣಕ್ಕೆ ತಿರುಗಿ ಕಪ್ಪಾಗಿ ಒಣಗಿ ಹೋಗುತ್ತಿವೆ, ಮುಂದಿನ ತಿಂಗಳಲ್ಲಿ ಕಟಾವಿಗೆ ಬರಬೇಕಾಗಿದ್ದ ಕೋಕೋ ಕಾಯಿಗಳು ಪೂರ್ತಿಯಾಗಿ ಒಣಗಿ ಸಂಪೂರ್ಣ ನಷ್ಟ ವಾಗಿವೆ. ಇದರಿಂದ ಕೋಕೋ ಬೆಳೆದ ರೈತರು ಆತಂಕ ದಲ್ಲೇ ದಿನ ದೂಡುತ್ತಿದ್ದಾರೆ.ಯಾವ ಮದ್ದು ಸಿಂಪರಣೆ ಯಿಂದಲೂ ಪ್ರಯೋಜನ ವಾಗುತ್ತಿಲ್ಲ ಎಂದು ರೈತರು ಹೇಳುತ್ತಾರೆ.

. ……. ರೈತರಿಗೆ ಒಂದಿಲ್ಲೊಂದು ರೀತಿಯಲ್ಲಿ ಹಾನಿ ಯಾಗುತ್ತಲೇ ಇದೆ. ಅಡಿಕೆ, ಕೋಕ್ಕೋ ಗಿಡಗಳು ಕೊಳೆಯಿಂದ ಬಾದೆ ಗೊಂಡರೆ, ತೆಂಗಿನಕಾಯಿ ಮತ್ತು ಬಾಳೆಕಾಯಿ ಬೆಳೆದವರ ಕಷ್ಟ ತುಂಬಾ ಆಗಿದೆ. ತೆಂಗಿನಕಾಯಿ ಯನ್ನು, ಅಳಿಲು ಗಳು. ಮಂಗ ಗಳು, ಬಿಳೆ ಮಂಗಗಳು ನಿರಂತರ ಮಿಡಿಗಾಯಿ, ಇರುವಾಗಿಂದಲೇ ತಿನ್ನಲು ಪ್ರಾರಂಭಿಸುತ್ತವೆ, ಎಷ್ಟೇ ಪಸಲು ಬಂದರೂ ಮಂಗ, ಅಳಿಲು ಗಳು ತಿಂದು ನಾಶ ಮಾಡುತ್ತವೆ ಅಳಿದುಳಿದ ಪಸಲು ಗಳು ಗಿಡದಿಂದ ಬಿದ್ದಾಗ ಮುಳ್ಳು ಹಂದಿ, ಮತ್ತು ಕಾಡು ಹಂದಿ ಗಳು ರಾತ್ರಿ ಧಾಳಿ ಮಾಡಿ, ತಿಂದು ಬಿಡುತ್ತವೆ, ಬಾಳೆಕಾಯಿ ಬೆಳೆದವರ ಸ್ಥಿತಿಯನ್ನು ಕೇಳುವುದೇ ಬೇಡ ಅನ್ನುತ್ತಾರೆ.ಹೀಗಾಗಿ ರೈತರ ಬದುಕು ತುಂಬಾ ಕಷ್ಟ ಕರ ವಾಗಿದೆ, ಅರಣ್ಯ ಇಲಾಖೆ ಯವರು ರೈತರಿಗೆ ಸುಸಜ್ಜಿತ ಬೇಲಿ ಮಾಡಿ ಕೊಡುವುದರಿಂದ ಪ್ರಾಣಿಗಳ ಹಾವಳಿ ತಪ್ಪಿಸಲು ಸಾಧ್ಯವಿದೆ. ಅದನ್ನು ಅರಣ್ಯ ಇಲಾಖೆ ಮೊದಲು ಮಾಡಲಿ ಎಂದು ರೈತರು ಕೇಳುತ್ತಿದ್ದಾರೆ.ಅರಣ್ಯ ದೊಳಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇಲಾಖೆ ಬೇಲಿ ಹಾಕುತ್ತದೆ. ಇದರಿಂದ ಅರಣ್ಯ ದೊಳಗೆ ಕಾಡು ಪ್ರಾಣಿಗಳು ನಿಶ್ಚಿoತೆ ಇಂದ ಬದುಕಲು ಆಗದೇ ರೈತರ ತೋಟ, ಗದ್ದೆ ಗಳಿಗೆ ಬಂದು ಹಾನಿ ಮಾಡುತ್ತವೆ, ಪ್ರಾಣಿಗಳು ಮಾಡಿರುವ ಹಾನಿ ಗಳನ್ನು ನೋಡಿಯೂ ರೈತರು ಏನೂ ಮಾಡದ ಸ್ಥಿತಿಗೆ ಬಂದಿದ್ದಾರೆ. ಅರಣ್ಯ ಇಲಾಖೆಯ ಕಾನೂನು ರೈತರಿಗೆ ಮಾತ್ರ ಸೀಮಿತ ವಾಗಿದ್ದು, ಅರಣ್ಯ ಪ್ರಾಣಿಗಳು ರೈತರ ಬದುಕಿಗೆ ಬಂದಾಗ ಅರಣ್ಯ ಇಲಾಖೆ ಅಧಿಕಾರಿ ಗಳ ಮೇಲೂ ಕ್ರಮ ವಾಗಬೇಕು, ಇಲ್ಲ ವಾದಲ್ಲಿ ರೈತರ ಭೂಮಿಗೆ ಬೇಲಿ ನಿರ್ಮಿಸಿ ಕೊಡಲಿ,ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ.