ಸುದ್ಧಿಕನ್ನಡ ವಾರ್ತೆ
ವಾಯುಭಾರ ಕುಸಿತದ ಪರಿಣಾಮ ಮತ್ತೆ ಮಳೆಯ ಆರ್ಭಟ ಆರಂಭಗೊಂಡಿದೆ. ಕಳೆದ ಸುಮಾರು ನಾಲ್ಕು ದಿನಗಳಿಂದ ಮಳೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ, ಗೋವಾ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಶನಿವಾರ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಸದ್ಯ ಉತ್ತರಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ.

ಭಾರಿ ಮಳೆ ಎಚ್ಚರಿಕೆ…!
ಉತ್ತರಕನ್ನಡ,ಉಡುಪಿ, ದಕ್ಷಿಣ ಕನ್ನಡ, ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆ ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ ಘೋಷಿಸಲಾಗಿದೆ. ಸದ್ಯ ಭಾರಿ ಮಳೆಯ ಕಾರಣ ಗೇರಸೊಪ್ಪಾ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಶರಾವತಿ ನದಿಗೆ ನೀಡು ಬಿಡಲಾಗುತ್ತಿದೆ. ಇದರಿಂದಾಗಿ ನದಿ ತೀರದಲ್ಲಿರುವ ಹಲವು ಗ್ರಾಮಗಳು ಜಲಾವೃತಗೊಂಡಿದೆ, ಈ ಹಿನ್ನೆಲೆಯಲ್ಲಿ ಹೊನ್ನಾವರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಟ್ಕಳದಲ್ಲಿಯೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

 

ಚಂಡಮಾರುತದ ಪರಿಚಲನೆ…
ನಿರಂತರವಾಗಿ ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದ ಭಾರಿ ಮಳೆ ಮುಂದುವರೆಯಲಿದೆ. ಸದ್ಯ ಮುಂಗಾರು ಬಂಗಾಳಕೊಲ್ಲಿಯ ಆಗ್ನೇಯದಿಕ್ಕಿನಿಂದ ಸಾಗಿ ಹೋಗುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕದ ಒಳನಾಡಿನ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 5.8 ಮತ್ತು 7.6 ಕಿ.ಮಿ ಮಧ್ಯದಲ್ಲೊಂದು ಚಂಡಮಾರುತದ ಪರಿಚಲನೆ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನೈಋತ್ಯ,ಪೂರ್ವಮಧ್ಯ ಅರಬ್ಬೀ ಸಮುದ್ರದ ಕೆಲ ಭಾಗದಲ್ಲಿ ಪ್ರತಿ ಗಂಟೆಗೆ 55 ಕಿಮಿ ಯಿಂದ 65 ಕಿಮಿ ವರೆಗೆ ವೇಗದ ಗಾಳಿ ಬೀಸಲಿದೆ. ಕರ್ನಾಟಕ, ಕೇರಳ, ಕರಾವಳಿ,ಲಕ್ಷದ್ವೀಪ, ಸೇರಿದಂತೆ ಹಲವು ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಮಿ ಕೆಲವೊಮ್ಮೆ 60 ಕಿಮಿ ವರೆಗೂ ವೇಗದ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಗೋವಾದಲ್ಲೂ ಮಳೆ ಮುಂದುವರೆಯಲಿದೆ…
ಕರ್ನಾಟಕದ ಕೆಲ ಭಾಗದಲದ್ಲಿ ಟರ್ಫ ನಿರ್ಮಾಣವಾಗಿದೆ. ಇದರ ಪ್ರಭಾವದಿಂದ ಮುಂದಿನ 5 ದಿನಗಳ ಕಾಲ ಗೋವಾದಲ್ಲಿಯೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗೋವಾ ರಾಜ್ಯದಲ್ಲಿ ಯಲ್ಲೊ ಅಲರ್ಟ ಘೋಷಿಸಿದೆ.

 


As a result of the decrease in atmospheric pressure, rain has started again. It has been raining heavily for the past four days. Meteorological department has warned that rain will continue for the next five days in various states including Karnataka, Goa, Tamil Nadu as a result of the fall in atmospheric pressure. A holiday for schools and colleges has been declared on Saturday in some districts of Karnataka. At present, rains are continuing across Uttarkannada district.