ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಲ್ಲಿ ಸಂಭ್ರಮ ಸಡಗರ ಗಳ ನಡುವೆ ಚೌತಿ ಹಬ್ಬವನ್ನು ಆಚರಿಸಲಾಗುತ್ತಿದೆ, ಚೌತಿ ದಿನದಂದು, ಮನೆ ಮನೆ ಗಳಲ್ಲಿ ಗಣಪತಿ ಯನ್ನು ಪೂಜಿಸಿ, ಅದೇ ದಿನ, ಮರುದಿನ, ಏಳು ದಿನಗಳ ಕಾಲ ಪೂಜಿಸಿ, ಬರುವ ಭಕ್ತರನ್ನು ಸತ್ಕರಿಸಿ,ಸಂಭ್ರಮಿಸುತ್ತಾರೆ.
ಸಾರ್ವಜನಿಕ ವಾಗಿ ಕೂಡ, ತಮ್ಮ ಅನುಕೂಲಕ್ಕೆ ತಕ್ಕಂತೆ, ಸಂಘ ಸಂಸ್ಥೆಗಳು, ಕಾರ್ಯಕ್ರಮ ಸಂಘಟಿಸಿ, ಸಾರ್ವಜನಿಕರಿಗಾಗಿ, ವಿವಿಧ ಸಂಗೀತ ಕಾರ್ಯಕ್ರಮ ಗಳು,ಧಾರ್ಮಿಕ ಕಾರ್ಯಕ್ರಮ ಗಳನ್ನು ನಡೆಸುತ್ತಾರೆ, ನಂದಿಗದ್ದೆ ಮತ್ತು ಯರಮುಖ ಸಾರ್ವಜನಿಕ ಗಣೇಶನ ಉತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮ ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ನಂದಿಗದ್ದೆಯಲ್ಲಿ ಕಳೆದ 49 ವರ್ಷ ಗಳಿಂದ ಯರಮುಖ ದಲ್ಲಿ 40 ವರ್ಷ ಗಳಿಂದ ಸಾರ್ವಜನಿಕ ವಾಗಿ ಶ್ರೀ ಗಣೇಶ ನನ್ನು ಭಕ್ತಿಯಿಂದ ಪೂಜಿಸಿ ಮಾದರಿಯಾಗಿದ್ದಾರೆ. ಉಳಿದಂತೆ, ಜೋಯಿಡಾ ರಾಮನಗರ, ಜಗಲ್ಬೇಟ್, ಅನಮೋಡ, ಅಣಶಿ, ಕುಂಬಾರವಾಡ, ಗಳಲ್ಲಿ ಉತ್ಸವ ಅದ್ದೂರಿ ಯಾಗಿ ನಡೆಸುತ್ತಾರೆ. 11 ದಿನಗಳ ಕಾಲ, ಯಾರಿಗೂ ಬಿಡುವಿಲ್ಲ, ವಿವಿಧ ಸ್ಥಳಗಳ, ಗಣೇಶ ನನ್ನು ನೋಡುವುದೇ ಒಂದು ಬಗೆಯ ಸಮಾಧಾನ. ಮನೆ ಮನೆ ಗಳಲ್ಲಿ, ಚಕ್ಕುಲಿ, ಮೋದಕ, ಅತಿರಸ, ಕರ್ಜಿಕಾಯಿ, ಲಾಡು, ಸೇರಿದಂತೆ, ವಿವಿಧ ಬಗೆಯ ತಿಂಡಿ ತಿನ್ನಲು ಈ ಮಳೆಗಾಲದ ಚೌತಿ ಹಬ್ಬ ಒಂದು ವೇದಿಕೆ ಅಂದರೆ ತಪ್ಪಲ್ಲ.