ಸುದ್ದಿ ಕನ್ನಡ ವಾರ್ತೆ

ಜೋಯಿಡ ತಾಲ್ಲೂಕಿನ ನಂದಿಗದ್ದೆ ಗ್ರಾಮದಲ್ಲಿ 49 ನೇ ವರ್ಷದ ಗಜಾನನೋತ್ಸವದ ಪ್ರಯುಕ್ತ 2 ನೇ ದಿನವಾದ ಗುರುವಾರದಂದು ಮಕ್ಕಳಿಗಾಗಿ ಭಗವದ್ಗೀತೆಯ ಶ್ಲೋಕ ಪಠಣದ ಸ್ಪರ್ಧೆ ಮತ್ತು ಗಣಪತಿ ಪ್ರೀತ್ಯರ್ಥವಾದ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಒಂದು ಕಾರ್ಯಕ್ರಮಕ್ಕೆ ರಾಧಾ ಹೆಗಡೆ, ಪದ್ಮಶ್ರೀ ಭಟ್, ಮೋಹನ್ ದೇಸಾಯಿ ಹಾಗೂ ಸದಾನಂದ ಹೆಗಡೆ ಅವರು ನಿರ್ಣಾಯಕ ರಾಗಿ ಆಗಮಿಸಿದ್ದರು.
ನಂತರ ಬನಶಂಕರಿ ಮಹಿಳಾ ಮಂಡಳಿ ನಂದಿಗದ್ದೆ ಇವರು ಮಹಿಳೆಯರಿಗೆ ಮತ್ತು ಯುವತಿಯರಿಗಾಗಿ ಅಂತ್ಯಾಕ್ಷರಿ ಮತ್ತು ಏಕ್ ಮಿನಿಟ್ ಸ್ಪರ್ಧೆಯನ್ನು ಆಯೋಜಿಸಿ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಗಜಾನನೋತ್ಸವ ಸಮಿತಿಯ ಅಧ್ಯಕ್ಷರು ಶ್ರೀ ಅಜಿತ್ ಆರ್ ಹೆಗಡೆ, ದಯಾನಂದ ದಾನಗೇರಿ, ಸುರೇಶ ಬಾಂದೇಕರ್, ಶಶಿಕಾಂತ ಎಸ್ ಹೆಗಡೆ, ಅನಂತ ಆರ್ ಭಟ್, ಸುಧಾಮ ಎಸ್ ದಾನಗೇರಿ , ಸದಾನಂದ ಉಪಾಧ್ಯ ಮತ್ತು ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.

 

ಹಾಗೆಯೇ ಇಂದು ಕೂಡ ಪು. ಪ್ರಸನ್ನ ಭಟ್ ರವರ ನೇತೃತ್ವದಲ್ಲಿ ಮಹಾ ಗಣಪತಿಯ ಸನ್ನಿಧಾನದಲ್ಲಿ ಗಣಹವನ ಸತ್ಯ ಗಣಪತಿ ಪೂಜೆ ಅಥರ್ವಶೀರ್ಷ ಪಾರಾಯಣ ಕಾರ್ಯಕ್ರಮಗಳು ಇದ್ದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.ರಾತ್ರಿ ಸಭಾ ಕಾರ್ಯಕ್ರಮ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ತದ ನಂತರ ಸುದರ್ಶನ್ ಹೆಗಡೆ ಚೌಕ ಇವರ ಸಾರಥ್ಯದಲ್ಲಿ ಮರಳಿ ಬಂದ ಮುತ್ತೈದೆ ಎಂಬ ಸಾಮಾಜಿಕ ನಾಟಕವನ್ನ ಆಯೋಜಿಸಲಾಗಿದೆ.