ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯಾದ್ಯಂತ ಉತ್ಸಾಹದಿಂದ ಗಣೇಶನ ಆಗಮನವಾಗಿದೆ. ಗೋವಾ ರಾಜ್ಯಾದ್ಯಂತ ಗಣೇಶ ಚತುರ್ಥಿಯ ಉತ್ಸಾಹವನ್ನು ಕಾಣಬಹುದಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಮನೆಯಲ್ಲಿಯೂ ಕೂಡ ಗೌರಿ ಗಣೇಶ ವಿರಾಜಮಾನರಾಗಿದ್ದಾರೆ. ಮುಖ್ಯಮಂತ್ರಿಮಂತ್ರಿ ಸಾವಂತ್ ರವರ ಮನೆಗೆ ಗೌರಿ ಗಣೇಶ ಹಬ್ಬಕ್ಕೆ ಹಾಗೂ ಗಣೇಶನ ದರ್ಶನಕ್ಕೆ ರಾಜಕೀಯ ನಾಯಕರು ತೆರಳಿ ದರ್ಶನ ಪಡೆದುಕೊಂಡಿದ್ದಾರೆ.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಕೊಠಂಬಿಯಲ್ಲಿರುವ ಮನೆಯಲ್ಲಿ ಪ್ರತಿ ವರ್ಷದಂತೆಯೇ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಪತ್ನಿ, ಮಗಳು, ತಂದೆ ಹಾಗೂ ಸಂಬಂಧಿಕರು ಪೂಜೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣೇಶ ಹಬ್ಬದ ಪೋಟೊವನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣಪನ ದರ್ಶನ ಪಡೆದುಕೊಳ್ಳಲು ರಾಜಕೀಯ ನಾಯಕರು. ಜನತೆ ಆಗಮಿಸುತ್ತಿದ್ದಾರೆ. ಸಚಿವ ಮಾವಿನ್ ಗುದಿನ್ಹೊ, ಜೀತ್ ಅರೋಲ್ಕರ್, ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮಾಂವ್, ಕೇದಾರ್ ನಾಯ್ಕ, ಸಂಕಲ್ಪ ಅಮೋಣಕರ್, ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ, ಚಂದ್ರಕಾಂತ ಶೇಟಯೆ, ಕೃಷ್ಣಾ ದಾಜಿ ಸಾಲ್ಕರ್, ಶಾಸಕ ಮೈಕಲ್ ಲೋಬೊ, ರುಡಾಲ್ಫ ಫರ್ನಾಂಡೀಸ್, ಸೇರಿದಂತೆ ರಾಜಕೀಯ ನಾಯಕರು ಮುಖ್ಯಮಂತ್ರಿಗಳ ಮನೆಗೆ ತೆರಳಿ ಗಣಪತಿಬಪ್ಪನ ದರ್ಶನ ಪಡೆದುಕೊಂಡಿದ್ದಾರೆ.
ಗೋವಾ ರಾಜ್ಯಾದ್ಯಂತ ಉತ್ಸಾಹದಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಗೀಓವಾದ ಸುಪುತ್ರ ಹಾಗೂ ಕೇರಳದ ರಾಜ್ಯಪಾಲರಾದ ರಾಜೇಂದ್ರ ಅರ್ಲೆಕರ್ ರವರು ಗೋವಾದ ಮಯೆಯಲ್ಲಿರುವ ತಮ್ಮ ಮನೆಯಲ್ಲಿ ಗೌರಿಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.
The arrival of Lord Ganesha is celebrated with enthusiasm across the state of Goa. Ganesh Chaturthi spirit can be seen all over the state of Goa. Goa Chief Minister Pramoda Sawant’s house is also home to Gauri Ganesh. Political leaders have gone to Chief Minister Sawant’s house for Gauri Ganesha festival and to have darshan of Lord Ganesha.