ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗೋವಾಕ್ಕೆ ಗಣೇಶ ಚರತುರ್ಥಿಯಂದು ಗಣಪನ ಪೂಜೆಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಿಂದಲೇ ಸುಮಾರು 500 ಕ್ಕೂ ಹೆಚ್ಚು ಜನ ಪುರೋಹಿತರು ಗೋವಾಕ್ಕೆ ಆಗಮಿಸಿದ್ದಾರೆ. ಇಂದು ಕಾರವಾರ ಭಾಗದಿಂಬ ಬರುವ ಎಲ್ಲ ಬಸ್ ಭಾರಿ ಗರ್ದಿಯಿತ್ತು. ಬಸ್ ನಲ್ಲಿ ಗೋವಾಕ್ಕೆ ಗಣಪನ ಪೂಜೆ ಆಗಮಿಸುವ ಪುರೋಹಿತರೇ ಹೆಚ್ಚಾಗಿದ್ದರು.
ಚತುರ್ಥಿಯಂದು ಗೋವಾದಲ್ಲಿ ಹಿಂದೂಗಳ ಮನೆ ಮನೆಯಲ್ಲಿಯೂ ಗಣೇಶನನ್ನು ಪೂಜಿಸಲಾಗುತ್ತದೆ. ಗೋವಾದಲ್ಲಿ ಗಣಪನ ಪೂಜೆಗೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಕುಮಟಾ, ಗೋಕರ್ಣ, ಉಮ್ಮಚಗಿ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು ಈಗಾಗಲೇ ಗೋವಾಕ್ಕೆ ಆಗಮಿಸಿದ್ದಾರೆ. ಗಣಪನ ಪೂಜೆಗೆ ಮಂಗಳವಾರ ಮಧ್ಯಾನ್ಹವೇ ಬಹುತೇಕ ಪುರೋಹಿತರು ಗೋವಾಕ್ಕೆ ಬಂದು ತಲುಪಿದ್ದಾರೆ.
ಕಾರವಾರದಿಂದ ಗೋವಾಕ್ಕೆ ಬರುವ ಎಲ್ಲ ಬಸ್ ಗಳು ಭಾರಿ ಗರ್ದಿಯಿಂದ ಕೂಡಿತ್ತು. ಪ್ರತಿ ಬಸ್ ನಲ್ಲಿ ಉತ್ತರಕನ್ನಡ ಜಿಲ್ಲೆಯ ವಿವಿಧ ಭಾಗದಿಂದ ಗೋವಾಕ್ಕೆ ಬರುವ ಪುರೋಹಿತರೇ ಹೆಚ್ಚಾಗಿದ್ದರು ಎನ್ನುವುದು ವಿಶೇಷ.
ಗೋವಾದಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿಯೂ ಪೂಜೆ ಸಲ್ಲಿಸುವವರು ಕರ್ನಾಟಕದ ಮೂಲದ ಪುರೋಹಿತರೇ ಆಗಿದ್ದಾರೆ. ಇವರ ಮೂಲಕ ಗೋವಾದಲ್ಲಿ ಎಲ್ಲಡೆ ಗಣೇಶನ ಪೂಜೆಗೆ ಕರ್ನಾಟಕದ ಪುರೋಹಿತರೇ ಆಗಮಿಸುತ್ತಾರೆ ಎಂಬುದು ವಿಶೇಷ. ಗೋವಾದಲ್ಲಿ ಗಣೇಶ ಚತುರ್ಥಿಗೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.