ಸುದ್ಧಿಕನ್ನಡ ವಾರ್ತೆ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಚರಿತ್ರೆಯು ಜಗದ್ಗುರು ಶ್ರೀ
ಆದಿಶಂಕರಾಚಾರ್ಯರಷ್ಟೇ ಪುರಾತನವಾದದ್ದು, ಶ್ರೀಶಂಕರರಿಂದ ಪ್ರವರ್ತಿಸಲ್ಪಟ್ಟು ಮುಂದುವರೆದು ಬಂದು, ನಮ್ಮೆಲ್ಲಾ ಆಸ್ತಿಕರ ಶೃದ್ಧಾ ಕೇಂದವಾಗಿ ಕಂಗೊಳಿಸುತ್ತಿದೆ ಶ್ರೀ ಸ್ವರ್ಣವಲ್ಲೀ ಗುರುಪರಂಪರೆ,ಶ್ರೀ ಸ್ವರ್ಣವಲ್ಲೀ ಸೋಂದಾ ಮಹಾಸಂಸ್ಥಾನ. ಮೋಕ್ಷಪ್ರದವಾದ ಪವಿತ್ರ ಕ್ಷೇತ್ರವೆಂದೇ ಪ್ರಸಿದ್ಧವಾಗಿರುವ ಕಾಶಿಯ ದಶಾಶ್ವಮೇಧ ಘಾಟ್ ನಮ್ಮ ಶ್ರೀ ಗುರುಪರಂಪರೆಯ ಉಗಮಸ್ಥಾನ. ಅನಂತರದಲ್ಲಿ ಉಜ್ಜಯಿನಿ, ಶ್ರೀ ಕ್ಷೇತ್ರ ಗೋಕರ್ಣ, ಕಡತೋಕೆ, ಸಹಸ್ರಲಿಂಗ – ಈ ಕ್ಷೇತ್ರಗಳಿಗೆ ಕಾಲ-ಸಂದರ್ಭಗಳಲ್ಲಿ ಶ್ರೀಮಠವು ಸ್ಥಳಾಂತರಗೊಳ್ಳುತ್ತಾ ಸಾಗಿಬಂದಿದೆ. ಸುಧಾಪುರ (ಸೋಂದಾ) ಎಂಬ ಪ್ರಸಿದ್ಧ ಕ್ಷೇತ್ರದಲ್ಲಿ `ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ’ ಎಂಬ ಅಭಿಧಾನದಿಂದ ಪ್ರಸ್ತುತ ಶ್ರೀಮಠವು ಕಂಗೊಳಿಸುತ್ತಿದೆ. ಶ್ರೀ ಶಂಕರಾಚಾರ್ಯರಿಂದ ಪ್ರವರ್ತಿಸಲ್ಪಟ್ಟ ಈ ಯತಿಪರಂಪರೆಯಲ್ಲಿ `ಶ್ರೀ ವಿಶ್ವವಂದ್ಯೇಂದ್ರಸರಸ್ವತೀ’ ಎಂಬುವರು ಮೊದಲನೆಯವರು. ಆಯಾ ದೇಶ-ಕಾಲ-ಸಂದರ್ಭಗಳ ಪರಿಧಿಯಲ್ಲಿ ಅವಿಚ್ಛಿನ್ನವಾಗಿ ಸಾಗಿಬಂದ ಈ ಪರಂಪರೆಯಲ್ಲಿ ಪ್ರಸ್ತುತ 54-ನೆಯ ಪೀಠಾಧಿಪತಿಗಳಾಗಿ ಶ್ರೀ ಶ್ರೀಮದ್
ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳವರು ಶಿಷ್ಯಕೋಟಿಯನ್ನು ಅನುಗ್ರಹಿಸುತ್ತಿದ್ದಾರೆ.
ಸೋಂದಾ ಶ್ರೀ ಸ್ವರ್ಣವಲ್ಲಿಯಲ್ಲಿ ಶ್ರೀಮಠ:
ಕ್ರಿಸ್ತಶಕ ಹದಿನಾರನೇ ಶತಮಾನದ ಕಾಲದಲ್ಲಿ ಸೋದೆಯ ಅರಸನಾಗಿ ಅರಸಪ್ಪ ನಾಯಕನೆಂಬ ಆಸ್ತಿಕನು ಆಳ್ವಿಕೆ ನಡೆಸುತ್ತಿದ್ದನು. ಈತನಿಗೂ ಪುತ್ರ ಸಂತತಿ ಇರಲಿಲ್ಲ. ಈತ
ಶ್ರೀಮಠಕ್ಕೆ ಬಂದು ಶ್ರೀ ಗುರುಗಳ ಚರಣಾರವಿಂದಗಳಲ್ಲಿ ಭಕ್ತಿ-ನಮ್ರತೆಯಿಂದ ನಮಸ್ಕರಿಸಿ, ತನ್ನ ದುಃಖವನ್ನು ನಿವೇದಿಸಿಕೊಂಡನು. ಪುತ್ರಸಂತತಿಯನ್ನು ಪಡೆಯುವಂತೆ ತನಗೆ
ತಮ್ಮಿಂದ ಆಶೀರ್ವಾದವಾಗಬೇಕೆಂದು ಬೇಡಿಕೊಂಡು, ದೇವತೆಗಳಿಗೂ, ಶ್ರೀ ಗುರು ಪಾದುಕೆಗಳಿಗೂ ವಿಶೇಷ ಪೂಜೆಯನ್ನು ಸಲ್ಲಿಸಿದನು. ಕಾಲಾನಂತರದಲ್ಲಿ ಶ್ರೀ ಗುರುದೇವತಾ ಅನುಗ್ರಹದಿಂದ ಪುತ್ರ ಸಂತತಿಯನ್ನೂ ಪಡೆದುಕೊಂಡನು. ಹಿಂದೆ ಈ ಸಹಸ್ರಲಿಂಗ ಮಠದಲ್ಲಿ ನಡೆದ ಕಳ್ಳತನದ ಅವಘಡವನ್ನು ತಿಳಿದಿದ್ದ ಅರಸಪ್ಪ ನಾಯಕನು, ಈ ಸ್ಥಳದಲ್ಲಿ ಶ್ರೀ ಮಠವು ಹೆಚ್ಚು ಕಾಲ ಇರುವುದು ಯೋಗ್ಯವಲ್ಲವೆಂದು ಭಾವಿಸಿದನು. ಅಲ್ಲದೇ ಗೋಸೂರು ಎಂಬ ಪ್ರದೇಶವನ್ನು ಗೊತ್ತುಪಡಿಸಿ, ಅಲ್ಲಿ ನೂತನವಾದ ಸುಂದರ ಮಠವನ್ನು
ನಿರ್ಮಿಸಿದನು. ಅಲ್ಲಿ ಶ್ರೀ ಲಕ್ಷ್ಮೀನೃಸಿಂಹ, ಶ್ರೀ ಚಂದ್ರಮೌಳೀಶ್ವರ ದೇವತೆಗಳಿಗೆ, ಹಾಗೂ ಶ್ರೀ ಕಾಶೀ ಗಂಗಾವಿಶ್ವೇಶ್ವರ, ಶ್ರೀ ರತ್ನಗರ್ಭಗಣಪತಿ, ಶ್ರೀ ವೇದವ್ಯಾಸರು, ಶ್ರೀ
ಶಂಕರಭಗವತ್ಪಾದರು, ಈ ಎಲ್ಲ ದೇವತೆಗಳಿಗೆ ವ್ಯವಸ್ಥಿತವಾದ ಶಿಲಾಮಯ ಗುಡಿಯನ್ನೂ ನಿರ್ಮಿಸಿ, ಈ ಎಲ್ಲ ಮಂದಿರಗಳನ್ನೊಳಗೊಂಡ ¨s Àವ್ಯ ಮಠವನ್ನು ಶ್ರೀ
ಚಂದ್ರಶೇಖರೇಂದ್ರಸರಸ್ವತಿಗಳ ಪದತಲದಲ್ಲಿ ಸಮರ್ಪಿಸಿದನು. ಈ ಎಲ್ಲ ದೇವತೆಗಳ ನಿತ್ಯಪೂಜಾದಿ ಕೈಂಕರ್ಯಗಳು ಸುಗಮಾಗಿ ನಡೆಯಬೇಕೆಂಬ ಇಚ್ಛೆಯಿಂದ ಐವತ್ತೆರಡು
ಗ್ರಾಮಗಳನ್ನೂ ಶ್ರೀಗಳವರ ಸಂನಿಧಿಗೆ ಹಿರಣ್ಯೋದಕ ಸಹಿತವಾಗಿ ದಾನ ನೀಡಿದನು. ಈ ಪ್ರದೇಶವನ್ನೊಳಗೊಂಡ ಗ್ರಾಮಕ್ಕೆ ಹೊನ್ನೆಹಳ್ಳಿ ಎಂಬುದಾಗಿಯೂ, ಶ್ರೀಮಠಕ್ಕೆ
ಸ್ವರ್ಣವಲ್ಲೀಮಹಾಸಂಸ್ಥಾನವೆಂಬುದಾಗಿಯೂ ನಾಮಕರಣ ಮಾಡಿ, ಈ ಎಲ್ಲ ಸಂಗತಿಗಳನ್ನೂ ತಾಮ್ರಶಾಸನದಲ್ಲಿ ಬರೆಯಿಸಿ ಅದನ್ನು ಯತಿಗಳ ಪದತಲದಲ್ಲಿ
ಸಮರ್ಪಿಸಿದನು. ಶ್ರೀ ಚಂದ ??ಶೇಖರೇಂದ ??ಸರಸ ??ತಿಗಳ ಗುರುಗಳಾದ ಶ್ರೀ ಸರ್ವಜ್ಞೇಂದ್ರಸರಸ್ವತೀ ಸ್ವಾಮಿಗಳು ಕೆಲವು ಕಾಲದ ನಂತರ ವಿಷ್ಣುಪದವಿಯನ್ನು ಸೇರಿದರು.
ಅನಂತರ ಶ್ರೀ ಚಂದ್ರಶೇಖರೇಂದ್ರಸರಸ್ವತಿಗಳು ಯೋಗ್ಯ ಶಿಷ್ಯನನ್ನು ಸ್ವೀಕರಿಸಿ, ಶ್ರೀ ಸರ್ವಜ್ಞೇಂದ್ರಸರಸ್ವತಿಗಳೆಂಬ ಪಟ್ಟನಾಮವನ್ನಿಟ್ಟು ಪೀಠದಲ್ಲಿ ನಿಯೋಜಿಸಿದರು. ಮುಂದೆ
ಇವರ ಶಿಷ್ಯರಾಗಿ ಪೀಠಕ್ಕೆ ಬಂದವರು ಶ್ರೀ ರಾಮಚಂದ್ರೇಂದ್ರಸರಸ್ವತಿಗಳು.
ಶ್ರೀ ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳು:
ಶ್ರೀ ಸರ್ವಜ್ಞೇಂದ್ರಸರಸ್ವತೀ ಮಹಾಸ್ವಾಮಿಗಳವರ ನಂತರದಲ್ಲಿ ಶ್ರೀ ಸ್ವರ್ಣವಲ್ಲೀ ಗುರುಪರಂಪರೆಯ ಐವತ್ತನಾಲ್ಕನೆಯ ಪೀಠಾಧಿಪತಿಗಳಾಗಿ ಭವ್ಯ ಪೀಠವನ್ನು
ಅಲಂಕರಿಸಿದವರು ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳವರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿಡಗೋಡು ಗ್ರಾಮದಲ್ಲಿ ಶ್ರೀಮತೀ ಶರಾವತೀ ಮತ್ತು ಶ್ರೀ ಶಿವರಾಮ ಭಟ್ಟ ದಂಪತಿಗಳ ಸುಪುತ್ರರು ಶ್ರೀ ಪರಮೇಶ್ವರ ಭಟ್ಟ ರವರು( ಈಗಿನ ಪೀಠಾಧಿಪತಿಗಳ ಪೂರ್ವಾಶ್ರಮದ ಹೆಸರು).
1991-ರ ಫೆಬ್ರವರಿ 2
ರಂದು ಕಂಚೀ ಕಾಮಕೋಟೀ ಪೀಠದ ಶ್ರೀ ಪರಮಾಚಾರ್ಯರ ಆಶೀರ್ವಾದದೊಂದಿಗೆ, ಶ್ರೀ ಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಸಂನ್ಯಾಸದೀಕ್ಷೆಯನ್ನು
ಪಡೆದಾಗ ಶ್ರೀ ಸ್ವರ್ಣವಲ್ಲೀ ಗುರುಪರಂಪರೆಯ 54-ನೆಯ ಯತಿವರೇಣ್ಯರ ಪೀಠಾರೋಹಣವು ಸಂಪನ್ನವಾಯಿತು.
ಪರಮಪೂಜ್ಯರು `ಶ್ರೀಮದ್ ಗಂಗಾಧರೇಂದ್ರ ಸರಸ್ವತೀ’ ಎಂಬ ಅಭಿಧಾನದೊಂದಿಗೆ ಶ್ರೀ ಸ್ವರ್ಣವಲ್ಲೀ ಗುರುಪರಂಪರೆಯ ವ್ಯಾಖ್ಯಾನ ಸಿಂಹಾಸನವನ್ನೇರಿದ ಆ ಸಂಧರ್ಭವು ಈ ಸ್ಥಳದಲ್ಲಿ ಸುವರ್ಣಲತೆಯೊಂದು ಚಿಗುರೊಡೆದ ಐತಿಹಾಸಿಕ ಕ್ಷಣವಾಗಿತ್ತು. ಜಗನ್ನಿಯಾಮಕನ ನಿರ್ದೇಶನದಂತೆ ಶ್ರೀ ಸರ್ವಜ್ಞೇಂದ್ರರು ಬಾಹ್ಯಪೀಠದಿಂದೆದ್ದು ಶಿಷ್ಯರ ಅಂತರಂಗ ಪೀಠವನ್ನು ಸೇರಿದಾಗ, ಈವರೆಗೆ ಅಂತರಂಗದಲ್ಲಿಯೇ ಅನಭಿವ್ಯಕ್ತ ಸ್ವರೂಪದಿಂದಿದ್ದ ಗುರು ತತ್ತ್ವವೊಂದು ಸಾಕಾರ ರೂಪದಿಂದ ಬಾಹ್ಯ ಪೀಠವನ್ನಲಂಕರಿಸಿತೋ ಎಂಬಂತೆ ಪರಮಪೂಜ್ಯರ
ಪೀಠಾರೋಹಣವು ಶಿಷ್ಯರಲ್ಲಿ ಸಾತ್ವಿಕವಾದ ಸಂಚಲನವನ್ನುಂಟುಮಾಡಿತು.
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ
ಮಹಾಸ್ವಾಮಿಗಳವರದ್ದು. ಪರಂಪರೆಯಿಂದಲೂ, ಸ್ವಯಂ ಆಚರಣೆಯಿಂದಲೂ ಪ್ರಾಪ್ತವಾದ ಅದ್ಭುತ ತಪೆÇೀನಿಷ್ಠೆ, ಏಕಾಗ್ರತೆ, ದೇವತಾರಾಧನೆಯಲ್ಲಿ ತಾದಾತ್ಮ್ಯ, ದೈವೀಸಾನ್ನಿಧ್ಯದಲ್ಲಿ
ಮೈಮರೆಯುವಿಕೆಯೇ ಮೊದಲಾದವುಗಳು ಪರಮಪೂಜ್ಯರಲ್ಲಿ ಕಂಡುಬರುವ ಆಧ್ಯಾತ್ಮಿಕ ಸಾಧನೆಯ ಸೋಪಾನಗಳಾಗಿವೆ. ಶಿಷ್ಯ-ಭಕ್ತರಲ್ಲಿ ಧರ್ಮiದ ಜಾಗೃತಿಯನ್ನು ಮೂಡಿಸಬೇಕೆಂಬ ನಿರಂತರ ಕಳಕಳಿ, ಪ್ರಯತ್ನ, ಲೋಕದ ಜನರಿಗೆ ಶಾಂತಿಯುತವಾದ ಸ್ವಸ್ಥ ಜೀವನವನ್ನು ಕಲ್ಪಿಸಬೇಕೆಂಬ ವಿಶಾಲವಾದ ಮನೋಭಾವ, ಸಾಮಾಜಿಕ ಪಿಡುಗಗಳನ್ನು
ನಿವಾರಿಸುವಲ್ಲಿ ಅವಿರತವಾದ ಪ್ರಯತ್ನ, ಇವೇ ಮೊದಲಾದ ಲೋಕಹಿತ ಸಾಧನೆಯಸೋಪಾನಗಳು ಪರಮಪೂಜ್ಯರಲ್ಲಿ ಕಂಡುಬರುತ್ತವೆ.
ಕಾಲಘಟ್ಟದ ಪ್ರವಾಹಕ್ಕೆ ಸಿಲುಕಿದ ಶಿಷ್ಯ ಭಕ್ತರ ಜೀವನದಲ್ಲಿ ಎದುರಾಗುವ ಅದೆಷ್ಟೋ ಸಂಕಷ್ಟಗಳಲ್ಲಿ ಶ್ರೀ ಶ್ರೀಗಳವರು ಶ್ರೀರಕ್ಷೆಯಾಗಿ ನಿಲ್ಲುತ್ತಾರೆ. ಪಾತ್ರತ್ವವೊಂದಿದ್ದರೆ
ದೈನ್ಯತೆಯನ್ನು ಕ್ಷಣಮಾತ್ರದಲ್ಲಿ ನೀಗಿಸುವ ಕನಕಧಾರೆಯೇ ಹರಿದುಬರುವಂತೆ ಮಾಡಿದ ಶ್ರೀ ಶಂಕರರನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಅಂತೆಯೇ ಪವಾಡಗಳನ್ನೂ ಮರೆಮಾಚುವ
ಅಂತಃಶಕ್ತಿಯನ್ನು ಹೊಂದಿದ ಶ್ರೀ ಶ್ರೀಗಳವರು ತಮ್ಮ ಆರಾಧ್ಯ ದೇವತೆಯನ್ನು ಪ್ರಾರ್ಥಿಸುವ ಮೂಲಕ ಆರ್ತ ಶಿಷ್ಯರೆಡೆಗೆ ದೈವಾನುಗ್ರಹಧಾರೆಯನ್ನು ಹರಿಸಬಲ್ಲರು ಎಂಬುದಕ್ಕೆ ಅನೇಕ ನಿದರ್ಶನಗಳು ನಮ್ಮ ಮುಂದೆ ನಿಲ್ಲುತ್ತವೆ. ಬದುಕು-ಸಾವುಗಳ ನಡುವೆ ಹೋರಾಡುತ್ತಿದ್ದ ಭಕ್ತರಿಗೆ ಪರಮಪೂಜ್ಯರೇ ಸಂಜೀವಿನಿಯಾದ ವಿಶಿಷ್ಟ ಘಟನೆಗಳನ್ನು ನೆನಪಿಸಿಕೊಂಡು ಭಾವುಕರಾಗುವ ಶಿಷ್ಯರು ಅಲ್ಲಲ್ಲಿ ಕಾಣಸಿಗುತ್ತಾರೆ.