ಸುದ್ಧಿಕನ್ನಡ ವಾರ್ತೆ
ಪಣಜಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದೆ. ಜಗತ್ಪ್ರಸಿದ್ಧ ಪ್ರವಾಸಿ ತಾಣ ಗೋವಾದಲ್ಲಿ ಮಾದಕ ಪದಾರ್ಥ ಅವ್ಯವಹಾರ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಗೋವಾದಲ್ಲಿ ಮಾದಕ ಪದಾರ್ಥ ಅವ್ಯವಹಾರ ನಡೆಸುತ್ತಿರುವ ಆತಂಕಕಾರಿ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಗೋವಾದಲ್ಲಿ ಇದೀಗ ಮಾದಕ ಪದಾರ್ಥ ಅವ್ಯವಹಾರವನ್ನು ಕ್ಯೂಆರ್ ಕೋಡ್ ಬಳಸಿ ನಡೆಸಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಗೋವಾದಲ್ಲಿ ಕೆಲವೆಡೆ ಇಂತಹ ಕ್ಯೂಆರ್ ಕೋಡ್ ಗಳನ್ನು ವಿದ್ಯುತ್ ಕಂಬದ ಮೇಲೆಲ್ಲಾ ಹಚ್ಚಲಾಗಿರುವಯುದು ಆತಂಕಕ್ಕೆ ಕಾರಣವಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಡ್ರಗ್ಸ ಹೆಸರು ಮತ್ತು ಮಾಹಿತಿ ಲಭಿಸುತ್ತಿದೆ. ಈ ಅಕ್ರಮ ತಡೆಗೆ ಪೋಲಿಸರು ಬಲೆ ಬೀಸಿದ್ದಾರೆ. ಇದೊಂದು ಪೋಲಿಸರಿಗೆ ಸವಾಲಾಗಿ ಪರಿಣಮಿಸಿದೆ.
ಮಾದಕ ಪದಾರ್ಥ ಅವ್ಯವಹಾರಕ್ಕೂ ಕ್ಯೂ ಆರ್ ಕೋಡ್ ಬಳಸಿ ನಡೆಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ಗೋವಾದ ಪ್ರಮುಖ ಸ್ಥಳಗಳಲ್ಲಿಯೇ ಇಂತಹ ಕ್ಯೂ ಆರ್ ಕೋಡ್ ಗಳು ಪತ್ತೆಯಾಗಿದೆ, ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಮಾದಕ ಪದಾರ್ಥ ಪಡೆಯುವ ಸಂಪರ್ಕ ಸಾಧ್ಯವಾಗಲಿದೆ. ಇಂತಹ ಆತಂಕಕಾರಿ ಸ್ಕ್ಯಾನರ್ ಗಳು ಪೋಲಿಸ್ ಠಾಣೆಯಂತಹ ಮಹತ್ವದ ಸ್ಥಳಗಳಲ್ಲಿ ಪತ್ತೆಯಾಗಿದೆ.
ಗೋವಾ ಪೋಲಿಸರು ಈ ಕ್ಯೂ ಆರ್ ಕೋಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ, ಈ ಮಾದಕ ವ್ಯವಹಾರದ ಹಿಂದೆ ದೊಡ್ಡ ಗ್ಯಾಂಗ್ ಇರಬಹುದೇ ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ.
ಗೋವಾ ರಾಜ್ಯವು ಒಂದು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರು ಹೆಚ್ಚಳವಾಗುತ್ತಿರುವಂತೆಯೇ ಗೋವಾದಲ್ಲಿ ಮಾದಕ ಪದಾರ್ಥಗಳ ಅವ್ಯವಹಾರ ಕೂಡ ಹೆಚ್ಚುತ್ತಿರುವುದು ಆತಂಕಕರ ವಿಷಯವಾಗಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಮಾದಕ ಪದಾರ್ಥ ಅವ್ಯವಹಾರ ನಡೆಸುತ್ತಿರುವ ಈ ಪ್ರಕರಣವು ಪೋಲಿಸರಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಈ ಚಕ್ರವ್ಯೂಹ ಭೇಧಿಸಲು ಪೋಲಿಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.