ಸುದ್ಧಿಕನ್ನಡ ವಾರ್ತೆ
ಪಣಜಿ: ಬೆಳಗಾವಿ-ವಾಸ್ಕೊ ಇಂಟರ್ ಸಿಟಿ ಎಕ್ಸಪ್ರೆಸ್ ರೈಲು ಓಡಾಟ ಆರಂಭಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ, ಈ ರೈಲು ಓಡಾಟದಿಂದ ಗೋವಾ-ಕರ್ನಾಟಕ ಸಂಪರ್ಕ ಇನ್ನೂ ಸುಲಭವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರವರು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿರವ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಈ ಭಾಷಣದಲ್ಲಿ ಬೆಳಗಾವಿ ವಾಸ್ಕೊ ಇಂಟರ್ ಸಿಟಿ ಎಕ್ಸಪ್ರೆಸ್ ರೈಲು ಓಡಾಟ ಆರಂಭಿಸಬೇಕು ಎಂಬ ಆಘ್ರಹವನ್ನೂ ಮಾಡಿದ್ದಾರೆ.
ದಕ್ಷಿಣ ಗೋವಾ ಗಡಿ ಭಾಗದಿಂದ ಕರ್ನಾಟಕ ರಾಜ್ಯದ ಸೀಮೆಯನ್ನು ಜೋಡಿಸಲಾಗುತ್ತದೆ. ಪ್ರತಿದಿನ ಬೆಳಗಾವಿಯಿಂದ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ರಸ್ತೆ ಮಾರ್ಗವಾಗಿ ಓಡಾಟ ನಡೆಸುವ ಪ್ರವಾಸಿಗರ ಸಂಖ್ಯೆ ಅಧಿಕವಿದೆ. ಇದರಿಂದಾಗಿ ಗೋವಾ-ಕರ್ನಾಟಕ ಜೋಡಿಸುವ ಬೆಳಗಾವಿ-ವಾಸ್ಕೊ ಇಂಟರ್ ಸಿಟಿ ಎಕ್ಸಪ್ರೆಸ್ ರೈಲು ಓಡಾಟ ಆರಂಭಗೊಂಡರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.