ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಅನಧೀಕೃತವಾಗಿ ನಡೆಸುತ್ತಿದ್ದ ಮದರಸಾ (Madrasa) ಮೇಲೆ ಪೋಲಿಸರು ಧಾಳಿ ನಡೆಸಿ ಕರ್ನಾಟಕ, ಗೋವಾ, ಬಿಹಾರದ ಒಟ್ಟೂ 17 ಜನ ಮಕ್ಕಳನ್ನು ರಕ್ಷಿಸಿದ ಆತಂಕಕಾರಿ ಘಟನೆ ನಡೆದಿದೆ.
ಗೋವಾದ ಮಡಗಾಂವ ಹೌಸಿಂಗ್ ಬೋರ್ಡ (Housing Bord) ಪ್ರದೇಶದ ರುಮಡಾಮಾಲ್ ನಲ್ಲಿ ಯಾವುದೇ ಅಧೀಕೃತ ಪರವಾನಗಿಯಿಲ್ಲದೆಯೇ ಕಾರ್ಯ ನಿರ್ವಹಿಸುತ್ತಿದ್ದ ಮದರಸಾ ವಿರುದ್ಧ ಮೈನಾ-ಕುಡ್ತರಿ ಪೋಲಿಸರು ಕ್ರಮ ಕೈಗೊಂಡಿದ್ದಾರೆ. ಈ ಅಕ್ರಮ ಮದರಸಾದಲ್ಲಿದ್ದ ಕರ್ನಾಟಕಮ ಗೋವಾ, ಮತ್ತು ಬಿಹಾರದ ಒಟ್ಟೂ 17 ಮಕ್ಕಳನ್ನು ಪೋಲಿಸರು ರಕ್ಷಿಸಿದ್ದಾರೆ. ಈ ಮಕ್ಕಳ ಬಳಿ ಯಾವುದೇ ದಾಖಲೆಗಳು ಅಥವಾ ಆಧಾರ ಕಾರ್ಡ ಕೂಲ ಲಭ್ಯವಾಗದ ಹಿನ್ನೆಲೆಯಲ್ಲಿ ಪೋಲಿಸರು ಹೆಚ್ಚಿನನ ತನಿಖಾ ಕಾರ್ಯ ಕೈಗೆತ್ತಿಕೋಂಡಿದ್ದಾರೆ.(After the police found 17 children in the madrassa)
ಪೋಲಿಸರು ಮದರಸಾದಿಂದ 17 ಮಕ್ಕಳನ್ನು ರಕ್ಷಣೆ ಮಾಡಿದ ನಂತರ ಈ ಮಕ್ಕಳ ದಾಖಲಾತಿಯನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೋಲಿಸರು ಕೈಗೊಂಡಿದ್ದಾರೆ. ಈ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಇವರಿಗೆ ಉಂಟಾಗುವ ಮಾನಸಿಕ ಆಘಾತವನ್ನು ತಪ್ಪಿಸಲು ಮಕ್ಕಳ ಕಲ್ಯಾಣ ಸಮೀತಿಯನ್ನು ಸಂಪರ್ಕಿಸಿ ಮಕ್ಕಳನ್ನು ಒಂದೇ ಸ್ಥಳದಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮದರಸಾ ಬೇರೆ ಸ್ಥಳದಲ್ಲಿತ್ತು. ಆದರೆ ಅಲ್ಲಿನ ನಿವಾಸಿಗಳ ದೂರಿನ ನಂತರ ಸ್ಥಳವನ್ನು ಬದಲಾಯಿಸಲಾಗಿತ್ತು ಎಂದು ಪೋಲಿಸರು ನಡೆಸಿದ ತನಿಖೆಯಿಂದ ತಿಳಿದುಬಂದಿದೆ. ಈ ಮದರಸಾದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಪೋಲಿಸರಿಗೆ ದೂರಿದ ಹಿನ್ನೆಲೆಯಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸಿದ್ದಾರೆ.
ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ, ಗೋವಾ , ಬಿಹಾರದ ಒಟ್ಟೂ 17 ಮಕ್ಕಳನ್ನು ಪೋಲಿಸರು ರಕ್ಷಣೆ ಮಾಡಿದ್ದಾರೆ. ಗೋವಾದ ಮಡಗಾಂವನ ರುಮಡಾಮಾಲ್ ಅಂಜುಮನ್ ಪ್ರೌಢ ಶಾಲೆಯ ಹಿಂಭಾಗದಲ್ಲಿ ನೀಲಿ ಕಟ್ಟಡದಲ್ಲಿ ಈ ಮದರಸಾ ನಡೆಯುತ್ತಿದೆ ಎಂದು ಪೋಲಿಸರಿಗೆ ಸ್ಥಳೀಯರಿಂದ ದೂರು ಬಂದಿತ್ತು.