ಸುದ್ಧಿಕನ್ನಡ ವಾರ್ತೆ
ನವದೆಹಲಿ: ಎನ್ ಡಿಎ ತನ್ನ ಉಪರಾಷ್ಟ್ರಪತಿ ಸ್ಥಾನದ ಉಮೇದುವಾರರ ಹೆಸರನ್ನು ಘೋಷಿಸಿದೆ. ಬಿಜೆಪಿಯ ಹಿರಿಯ ನಾಯಕ ಹಾಗೂ ಝಾರ್ಖಂಡ್ ಮಾಜಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ರವರನ್ನು ಉಪರಾಷ್ಟ್ರಪತಿ ಸ್ಥಾನದ ಉಮೇದುವಾರರನ್ನಾಗಿ ಎನ್ ಡಿಎ ಘೋಷಿಸಿದೆ.
ಎನ್ ಡಿಎ ಸಂಸದೀಯ ಮಂಡಳದ ಉನ್ನತಮಟ್ಟದ ಬೈಠಕ್ ನಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ರಾಧಾಕೃಷ್ಣನ್ ರವರು ರಾಜಕೀಯ ಹಾಗೂ ಪ್ರಶಾಸನದಲ್ಲಿ ಹೊಂದಿರುವ ಹೆಚ್ಚಿನ ಅನುಭವವು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇವರು ಕೋಯಿಮತ್ತೂರ್ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಝಾರ್ಖಂಡ್ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.