ಸುದ್ಧಿಕನ್ನಡ ವಾರ್ತೆ
ಪಣಜಿ: ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕ , ದಕ್ಷಿಣ ಗೋವಾ ಜಿಲ್ಲಾ ಮತ್ತು ಸಾಲಸೇಟ ತಾಲೂಕಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಅಗಷ್ಟ 17 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಗೋವಾದ ಮಡಗಾಂವ ವೀರಶೈವ ಲಿಂಗಾಯತ ಹಾಲ್ ನಲ್ಲಿ 3 ನೇಯ ವರ್ಷದ ಶ್ರಾವಣೋತ್ಸವ -2025 ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರಾವಣೋತ್ಸವ ಕಾರ್ಯಕ್ರಮದಲ್ಲಿ ಅಂಬಿಕಾತನಯದತ್ತ, ಕವಿ-ಕಾವ್ಯ-ಕಲ್ಪನೆ ವಿಚಾರ ಸಂಕಿರಣ, ದ.ರಾ ಬೇಂದ್ರೆ ಜೀವನ ದರ್ಶನ (ಏಕವ್ಯಕ್ತಿ ಅಭಿನಯ) ಕಾರ್ಯಕ್ರಮ ಜರುಗಲಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ಪ.ಪೂ ಶ್ರೀ ಶಿವಪಂಚಾಕ್ಷರಿ ಮಹಾಸ್ವಾಮಿಗಳು ಶ್ರೀ ಗುರು ಮಡಿವಾಳೇಶ್ವರ ಮಠ ಬುಡರಕಟ್ಟಿ ಬೆಳಗಾವಿ ರವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಮಾರಂಭದ ಉಧ್ಘಾಟಕರಾಗಿ ಗೋವಾ ನಾವೆಲಿಯ ಶಾಸಕ ಉಲ್ಲಾಸ ತುವೇಕರ್ ಆಗಮಿಸಲಿದ್ದು, ಕಸಾಪ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಗೋವಾ ಇಂಡೊ-ಪೋರ್ಚುಗೀಸ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಆಶಯದ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸ್ಕøತ ನಿರ್ದೇಶನಾಲಯ ಭಾರತ ಸರ್ಕಾರ ನವದೆಹಲಿಯ ಡಾ. ಶಶಿಧರ ನರೇಂದ್ರ, ಧಾರವಾಡದ ಹಿರೀಯ ಸಾಹಿತಿ ಡಾ.ಕೃಷ್ಣಾ ಕಟ್ಟಿ, ಧಾರವಾಡದ ಹಿರೀಯ ರಂಗಕರ್ಮಿಗಳಾದ ಡಾ.ಪ್ರಕಾಶ ಗರುಡ, ಧಾರವಾಡದ ಹಿರೀಯ ರಂಗಕರ್ಮಿ ಹಾಗೂ ಚಿತ್ರನಟರಾದ ಅನಂತ ದೇಶಪಾಂಡೆ, ಧಾರವಾಡದ ಮನೋಹರ ಗೃಂಥಮಾಲೆ ವ್ಯವಸ್ಥಾಪಕರಾದ ಸಮೀರ್ ಜೋಶಿ ಉಪಸ್ಥಿತರಿರುವರು.
ಮಧ್ಯಾನ್ಹ 12 ರಿಂದ 1.30 ರವರೆಗೆ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಧಾರವಾಡದ ಮನೋಹರ್ ಗೃಂಥಮಾಲೆಯ ವ್ಯವಸ್ಥಾಪಕರಾದ ಸಮೀರ್ ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರಾವಣ ವೈಭವ ಬೇಂದ್ರೆ ಕಾವ್ಯದಲ್ಲಿ ಪ್ರಕೃತಿ ಹಾಗೂ ಸೌಂದರ್ಯ ಕುರಿತು ಡಾ. ಶಶಿಧರ ನರೇಂದ್ರ, ದತ್ತ ದರ್ಶನ ಬೇಂದ್ರೆ ಕಾವ್ಯದಲ್ಲಿ ಪ್ರೀತಿ ಪ್ರೇಮ ಹಾಗೂ ಅನುಭಾವಿಕ ನೆಲೆಗಳು ವಿಷಯದಲ್ಲಿ ಡಾ.ಕೃಷ್ಣಾ ಕಟ್ಟಿ, ಬೇಂದ್ರ ರವರ ನಾಟಕಗಳು ವಿಷಯದಲ್ಲಿ ಡಾ.ಪ್ರಕಾಶ ಗರುಡ, ದರಾ ಬೇಂದ್ರೆ ಜೀವನ ದರ್ಶನ ಏಕವ್ಯಕ್ತಿ ಅಭಿನಯ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ-ಲಘು ಮನರಂಜನೆ ಕಾರ್ಯಕ್ರಮ ಜರುಗಲಿದೆ. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೇಂದು ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಕಸಾಪ ಸಾಲಸೇಟ್ ತಾಲೂಕಾ ಅಧ್ಯಕ್ಷ ಬಸವರಾಜ್ ಬನ್ನಿಕೊಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.