ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿರುವ ಯಕ್ಷಗಾನ ಅಭಿಮಾನಿಗಳಿಗೆ ಸಂತಸದ ಸುದ್ಧಿ. ಅಗಷ್ಟ 17 ರಂದು ಭಾನುವಾರ ಗೋವಾದಲ್ಲಿ ಶ್ರೀ ಜಗನ್ಮಾತೆ ವನದುರ್ಗಿ ಯಕ್ಷಗಾನ ಪ್ರಸಂಗ ನಡೆಯಲಿದೆ.

ಗೋವಾ ರಾಜಧಾನಿ ಪಣಜಿ ಸಮೀಪದ ಪರ್ವರಿಯ ಮೆಜೆಸ್ಟಿಕ್ ಹೋಟೆಲ್ ಎದುರಿನ ಆಜಾದ್ ಭವನದಲ್ಲಿ ಭಾನುವಾರ ಸಂಜೆ 4 ಗಂಟೆಗೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ನಡೂರು ಮಂದಾರ್ತಿ ಮೇಳದ ಶ್ರೀ ಜಗನ್ಮಾತೆ ವನದುರ್ಗಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಗೋವಾ ಯಕ್ಷಗಾನ ಕಲಾಭಿಮಾನಿಗಳ ಬಳಗ ಈ ಯಕ್ಷಗಾನವನ್ನು ಸಂಯೋಜಿಸಿದೆ.

ಅಗಷ್ಟ 17 ರಂದು ಭಾನುವಾರ ಮಧ್ಯಾನ್ಹ 2.30 ರಿಂದ ಇದೇ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷಗಾನ ತರಬೇತಿ ಶಿಭಿರ ನಡೆಯಲಿದೆ. ತರಬೇತಿದಾರರಾಗಿ ಅರ್ಜುನ್ ಆಚಾರ್ಯ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಉಮಾರಾವ್ ವಾಸ್ಕೊ ಮತ್ತು ಶೃತಿ ಶೆಟ್ಟಿ ನೇತೃತ್ವದಲ್ಲಿ 20/25 ಜನರ ತಂಡ ತರಬೇತಿಗಾಗಿ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ವಾಸ್ಕೊದಲ್ಲಿ ಪ್ರತಿ ಭಾನುವಾರ ಯಕ್ಷಗಾನ ತರಬೇತಿ ನಡೆಯಲಿದೆ.