ಸುದ್ಧಿಕನ್ನಡ ವಾರ್ತೆ
ಪಣಜಿ(ಮಡಗಾಂವ): ರಾಷ್ಟ್ರೀಯ ಹೆದ್ದಾರಿ ನವೆಬಾಂದ್ ಬಾಳ್ಳಿ ಯಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಕರ್ನಾಟಕದ ಟ್ರಕ್ ಡಿಕ್ಕಿಹೊಡೆದಿದ್ದರಿಂದ ದ್ವಿಚಕ್ರವಾಹನ ಸವಾರ ಕಮಲೇಶ್ ಗಾಂವಕರ್ (34) ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಗೋವಾ ಕುಂಕಳ್ಳಿ ಪೋಲಿಸರು ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಗೋವಾದ ಬಾಳ್ಳಿ-ಮಡಗಾಂವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು ಕರ್ನಾಟಕ ನೋಂದಣಿಯ ಟ್ರಕ್ ಚಾಲಕ ವರದರಾಜ್ ನಾಯ್ಕ(ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ನಿವಾಸಿ) ಈತ ಟ್ರಕ್ ನಲ್ಲಿ ಗೋವಾದ ಕುಂಕಳ್ಳಿಯಿಂದ ಬಾಳ್ಳಿಗೆ ತೆರಳುತ್ತಿದ್ದ. ಗೋವಾ ಕಾಜು ದರ್ಬಾರ ಬಳಿ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ದ್ವಿಚಕ್ರ ವಾಹನ ಚಾಲಕ ಕಮಲೇಶ ಗಾಂವಕರ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಈತನನ್ನು ದಕ್ಷಿಣ ಗೋವಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಆತ ಅಷ್ಟರಲ್ಲೇ ಸಾವನ್ನಪ್ಪಿದ.
ಗೋವಾ ಕುಂಕಳ್ಳಿ ಪೋಲಿಸ್ ನಿರೀಕ್ಷಕ ಡಾಯಗೋ ಗ್ರೇಸಿಯಸ್ ರವರ ಮಾರ್ಗದರ್ಶನದಲ್ಲಿ ಪೋಲಿಸ್ ಉಪ ನಿರೀಕ್ಷಕ ಸುದನ್ ಭೋಸಲೆ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.