ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಆನ್ ಶೇರ್ ಕ್ಯಾಸಿನೊಗಳಲ್ಲಿ ಅಕ್ರಮ ಲೈವ್ ಗೇಮಿಂಗ್ (Live Gaming)ನಡೆಯುತ್ತಿದೆ. ಲೈವ್ ಗೇಮಿಂಗ್ ಪರವಾನಗಿಯು ಕೇವಲ ಆಫ್ ಶೇರ್ ಕ್ಯಾಸಿನೊಗಳಲ್ಲಿ ಮಾತ್ರ ಇರುತ್ತದೆ. ಆದರೆ ಗೋವಾದಲ್ಲಿ ನಿಯಮವನ್ನು ಉಲ್ಲಂಘಿಸಿ ಆನ್ ಶೇರ್ ಕ್ಯಾಸಿಸೊಗಳಲ್ಲಿ (on Share Casino) ಲೈವ್ ಗೇಮಿಂಗ್ ನಡೆಸಲಾಗುತ್ತಿದೆ. ಇಂತಹದ್ದೊಂದು ಸ್ಪೋಟಕ ಮಾಹಿತಿಯನ್ನು ಗೋವಾ ಫೊರ್ ವರ್ಡ ಪಕ್ಷದ ನಾಯಕ ವಿಜಯ್ ಸರ್ದೇಸಾಯಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ ಮಾಡಿದ್ದಾರೆ.
ಗೋವಾದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಕ್ಯಾಸಿನೊಗಳಲ್ಲಿ ಸ್ಟಿಂಗ್ ಆಪರೇಶನ್ ನಡೆಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಜುಲೈ 15 ರಂದು ಕ್ಯಾಸಿನೊ ಗೋಲ್ಡ ಕಾಂದೋಳಿ, ಜುಲೈ 27 ರಂದು ಆಟಲಾಂಟಿಜ್ ಕ್ಯಾಸಿನೊ ಕಲಂಗುಟ್, ಅಗಷ್ಟ 3 ರಂದು ಫಿನಿಕ್ಸ ಕ್ಯಾಸಿನೊ ಪಿರ್ಣ, ಈ ಮೂರು ಸ್ಥಳಗಳಲ್ಲಿ ಸ್ಟಿಂಗ್ ಆಪರೇಶನ್ ನಡೆಸಿದಾಗ ಈ ಮೂರು ಆನ್ ಶೇರ್ ಕ್ಯಾಸಿನೊಗಳಲ್ಲಿ ಲೈವ್ ಗೇಮಿಂಗ್ ನಡೆಸಲಾಗುತ್ತಿದೆ ಎಂಬುದು ಖಚಿತವಾಗಿದೆ ಎಂದು ವಿಜಯ್ ಸರ್ದೇಸಾಯಿ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಗೋವಾದಲ್ಲಿ ಹತ್ತಾರು ಕ್ಯಾಸಿನೊಗಳಿವೆ. ಗೋವಾದಲ್ಲಿ ಲೈವ್ ಗೇಮಿಂಗ್ ಕೇವಲ ಆಫ್ ಶೇರ್ ಕ್ಯಾಸಿನೊಗಳಿಗೆ ಮಾತ್ರ ಇದೆ. ಆದರೆ ಕ್ಯಾಸಿನೊಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಲೈವ್ ಗೇಮಿಂಗ್ ನಡೆಸಲಾಗುತ್ತಿದೆ ಎಂದು ವಿಜಯ್ ಸರ್ದೇಸಾಯಿ ಸ್ಪೋಟಕ ಮಾಹಿತಿ ನೀಡಿದ್ದಾರೆ.