ಸುದ್ಧಿಕನ್ನಡ ವಾರ್ತೆ
ಹೊರ ರಾಜ್ಯಗಳಿಂದ ಗೋವಾಕ್ಕೆ ಬಂದು ತಮ್ಮ ಹೆಸರು ಮತ್ತು ಅಡ್ಡಹೆಸರನ್ನು ಬದಲಾವಣೆ ಮಾಡಿಕೊಂಡು ಗೋವನ್ನರಂತೆಯೇ ಹೆಸರು ಮತ್ತು ಅಡ್ಡಹೆಸರು ಇಟ್ಟುಕೊಂಡವರಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲು ಗೋವಾ ಸರ್ಕಾರ ಮುಂದಾಗಿದೆ. ಹೌದು ಗೋವಾಕ್ಕೆ ಬಂದ ಹಲವು ಜನ ಕನ್ನಡಿಗರು ತಮ್ಮ ಹೆಸರು ಮತ್ತು ಅಡ್ಡಹೆಸರನ್ನು ಬದಲಾವಣೆ ವಮಾಡಿಕೊಂಡಿದ್ದಾರೆ. ಇದೀಗ ಈ ಪ್ರಕರಣವು ಗೋವಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಇಂತವರ ವಿರುದ್ಧ ಕಾರ್ಯಾಚರಣೆ ನಡೆಸಿ ಹೆಸರು ಬದಲಾವಣೆ ಅಕ್ರಮ ಎಂದು ಸಾಬೀತಾದರೆ ಅಂತವರಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ನೀಡಲು ಗೋವಾ ಸರ್ಕಾರ ಮುಂದಾಗಿದೆ. ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಗೋವಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೊರ ರಾಜ್ಯಗಳಿಂದ ಗೋವಾಕ್ಕೆ ಬಂದ ಹಲವು ಜನರು ಹೆಸರು ಮತ್ತು ಅಡ್ಡಹೆಸರನ್ನು ಬದಲಾಯಿಸಿಕೊಂಡು ಗೋವನ್ನರಂತೆಯೇ ಹೆಸರನ್ನು ಇಟ್ಟುಕೊಂಡಿದ್ದಾರೆ. ಈ ಮೂಲಕ ಗೋವಾ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗೋವಾದ ನೈಜ ಗುರುತು ನಶಿಸಿಹೋಗುತ್ತಿದೆ ಎಂದು ಗೋವಾ ಫೊರ್ ವರ್ಡ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಗೋವಾ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಪಕ್ಷದ ಹಲವು ಶಾಸಕರು ಬೆಂಬಲ ನೀಡಿದ್ದರು. ಅನಧೀಕೃತವಾಗಿ ನಡೆಯುತ್ತಿರುವ ಇಂತಹ ಪ್ರಕರಣಗಳನ್ನು ತಡೆಯಲು ಅಗತ್ಯ ಕಾಯ್ದೆಯ ತಿದ್ಧುಪಡಿ ತರುವಂತೆ ಶಾಸಕರು ಆಘ್ರಹಿಸಿದರು.
ಈ ಕುರಿತಂತೆ ಉತ್ತರಿಸಿದ ಮುಖ್ಯಮಂತ್ರಿ ಪ್ರಮೋದ ಸಾವಂತ್- ಹೆಸರು ಮತ್ತು ಅಡ್ಡಹೆಸರು ಬದಲಾವಣೆಯ ಪ್ರಕರಣದ ಕುರಿತು ತನಿಖೆ ಪೂರ್ಣಗೊಂಡ ನಂತರ ಈ ಕಾಯ್ದೆಯಲ್ಲಿ ಅಗತ್ಯವಿರುವ ತಿದ್ಧುಪಡಿಯನ್ನು ತರಲಾಗುವುದು ಎಂದು ಭರವಸೆ ನೀಡಿದರು.