ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದ ತಿಳಾರಿ ಅಳೇಕಟ್ಟಿನಿಂದ ಕರ್ನಾಟ ಕಕ್ಕೆ ನೀರು ಹರಿಸಲು ಮಹಾರಾಷ್ಟ್ರ, ಕರ್ನಾಟಕ ರಾಜ್ಯ ಮುಂದಾಗಿರವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳು ಗೋವಾವನ್ನು ತರಾಟೆಗೆ ತೆಗೆದುಕೊಂಡಿವೆ. ಗೋವಾ ಸರ್ಕಾರದ ಜಲಸಂಪನ್ಮೂಲ ಇಲಾಖೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಗೋವಾ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಆತಂಕವನ್ನು ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ತಿಳಾರಿ ನದಿಗೆ ಸಂಪರ್ಕ ಹೊಂದಿರುವ ಪುಕೇರಿಯಲ್ಲಿ ಅಣೇಕಟ್ಟು ಯೋಜನೆಯ ಕಾಮಗಾರಿಯನ್ನು ಆರಂಭಿಸಿದೆ. ಮಾಣೇರಿ, ಸಾಸೋಲಿ, ದೋಡಾಮಾರ್ಗ ತಾಲೂಕಿನ ಕೈಗಾರಿಕಾ ವಸಾಹತುಗಳ ಕುಡಿಯುವ ನೀರಿನ ಅಗತ್ಯತೆಯನ್ನು ಪೂಸೈಸಲು ಮನೇರಿ-ಸಸೋಲಿಯಲ್ಲಿ ಅಣೇಕಟ್ಟು ಕಾಮಗಾರಿ ಪೂರ್ಣಗೊಂಡಿದೆ. ಕಡಶಿ ನಾಲೆಯ ನೀರನ್ನು ತೆರೆಖೋಲ್ ನದಿ ಜಲಾನಯನ ಪ್ರದೇಶಕ್ಕೆ ತಿರುಗಿಸಲು ಅಣೇಕಟ್ಟು ಕಾಮಗಾರಿ ಪೂರ್ಣಗೊಂಡಿದೆ. ಈಗ ಕರ್ನಾಟಕ-ಮಹಾರಾಷ್ಟ್ರ ಈ ಬೇಡಿಕೆಯನ್ನು ಪೂರೈಸಲು ಧಾಮಣೆ ಜಲಾಶಯದಿಂದ ಮಾರ್ಕಂಡೇಯ ಜಲಶಾನಯನ ಪ್ರದೇಶಕ್ಕೆ ನೀರು ತೆಗೆದುಕೊಳ್ಳಲು ಯೋಜಿಸುತ್ತಿದೆ ಎಂದು ರಾಜೇಂದ್ರ ಕೇರಕರ್ ಆರೋಪಿಸಿದ್ದಾರೆ.

ಗೋವಾ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಭಂಡೂರ ನಾಲೆಯಿಂದ ತಿಳಾರಿ ಧಾಮಣೆ ಟಾಪ್ ಅಣೇಕಟ್ಟಿಗೆ ನೀರು ತಂದು ಕರ್ನಾಟಕಕ್ಕೆ ಕೊಂಡೊಯ್ಯುವ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಗೋವಾ ಪಾಲಿನ ತಿಳಾರಿ ನೀರು ಕೂಡ ಕರ್ನಾಟಕಕ್ಕೆ ಹರಿದುಹೋಗುವ ಸಾಧ್ಯತೆಯಿದೆ ಎಂದು ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಆರೋಪಿಸಿದ್ದಾರೆ.