ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ ನಾಗಪ್ಪ ಸಿದ್ದಿ (31) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನತೇಲಂಗಾರ ಸಮೀದ ಚಿಮನಳ್ಳಿಯವರಾದ ಚಂದ್ರಶೇಖರ, ನೀನಾಸಂ ತಂಡದಲ್ಲಿ ತರಬೇತಿ ಪಡೆದವರಾಗಿದ್ದು ಕಲಾವಿದರಾಗಿದ್ದರು. ಕಾಮಿಡಿ ಕಿಲಾಡಿ ಮೂಲಕ ಇವರು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದರು.
ಕೆಲ ವರ್ಷಗಳ ಹಿಂದೆ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಧಾರಾವಾಹಿಗಳಲ್ಲಿಯೂ ಪಾತ್ರಗಳನ್ನು ಮಾಡಿದ್ದರು.
ತೇಲಂಗಾರಿನ ಮೈತ್ರಿ ಕಲಾ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು.ಈ ವ್ಯಕ್ತಿ ಶುಕ್ರವಾರ ಚಿಮನಳ್ಳಿಯ ಕಾಡಿನಲ್ಲಿ ಶವವಾಗಿ ದೊರಕಿದ್ದಾರೆ. ಆಶಾ ಕಾರ್ಯಕರ್ತೆಯಾಗಿದ್ದ ಈತನ ತಾಯಿ ಲಕ್ಷ್ಮೀ ನಾಗಪ್ಪ ಸಿದ್ದಿ ಪೋಲಿಸ್ ದೂರು ನೀಡಿದ್ದು ಈತನ ಸಾವಿನಲ್ಲಿ ಸಂಶಯವಿದೆ ಎಂದು ಹೇಳಿಕೆ ನೀಡಿದ್ದಾರೆ.ಈತನ ಸಾವಿನ ತನಿಖೆಗೆ ಆಗ್ರಹ ಮಾಡಿದ್ದಾರೆ.
—-