ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದಿಂದ ಅನಮೋಡ್ ಘಾಟ್ ಮಾರ್ಗವಾಗಿ ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದಾಗ ಎರ್ಟಿಗಾ ಕಾರು ಇದ್ದಕ್ಕಿದ್ದಂತೆಯೇ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶುಕ್ರವಾರ ಈ ಘಟನೆ ಸಂಭವಿಸಿದೆ. ಶುಕ್ರವಾರ ಗೋವಾದಿಂದ ಎರ್ಟಿಗಾ ಕಾರಿನ ಮೂಲಕ ಪ್ರಯಾಣಿಕರು ಕರ್ನಾಟಕಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಆರಂಭದಲ್ಲಿ ಕಾರಿನಲ್ಲಿ ಕೊಂಚ ಹೊಗೆ ಕಾಣಿಸಿಕೊಂಡಿದೆ, ನಂತರ ಇದ್ದಕ್ಕಿದ್ದಂತೆಯೇ ಬೆಂಕಿ ಇಡೀ ಕಾರಿಗೆ ಆವರಿಸಿ ಕಾರು ಸುಟ್ಟುಹೋಗಿದೆ.
ಕಾರಿನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದ ಪ್ರಯಾಣಿಕರೆಲ್ಲ ಕೂಡಲೇ ಕೆಳಕ್ಕಿಳಿದರು, ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.