ಸುದ್ಧಿಕನ್ನಡ ವಾರ್ತೆ
ಪಣಜಿ: ಶಾಲೆಯ ವಿದ್ಯಾರ್ಥಿಗಳ ಶರೀರದಲ್ಲಿ ನೀರಿನ ಕೊರತೆಯುಂಟಾಗುತ್ತಿರುವ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರತಿದಿನ ಎರಡನೇಯ ಮತ್ತು ಆರನೇಯ ಕ್ಲಾಸ್ ನಂತರ ಪ್ರತ್ಯೇಕವಾಗಿ ನಾಲ್ಕು ನಿಮಿಗಳ ಕಾಲ ನೀರು ಕುಡಿಯಲು ಬ್ರೇಕ್ ನೀಡಬೇಕು ಎಂದು ಗೋವಾ ರಾಜ್ಯ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ.

ಶಿಕ್ಷಣ ಇಲಾಖೆಯ ಬಸಂಚಾಲಕ ಶೈಲೇಶ್ ಜಿಂಗಡೆ ರವರು ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳ ಶರೀರದಲ್ಲಿ ನೀರಿನ ಕೊರತೆಯುಂಟಾಗುತ್ತಿರುವುದರಿಂದ ಅವರ ಶರೀರದ ಮೇಲೆ ಪರಿಣಾಮವುಂಟಾಗುತ್ತಿದೆ ಎಂಬ ಅಂಶ ಕಳೆದ ಕೆಲ ವರ್ಷಗಳಿಂದಲೇ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಇದೀಗ ಈ ಆದೇಶ ಹೊರಡಿಸಲಾಗಿದೆ. ಪ್ರತಿದಿಹನ ಎರಡನೇಯ ಮತ್ತು ನಾಲ್ಕನೇಯ ಕ್ಲಾಸ್ ನಂತರ ನಾಲ್ಕು ನಿಮಿಷಗಳ ಕುಡಿಯುವ ನೀರಿನ ಬ್ರೇಕ್ ನೀಡಲು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಲಾಗಿದೆ.

ಈ ನಿರ್ಣಯವನ್ನು ಪಾಲಕರು ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಠಿಯಿಂದ ಶಿಕ್ಷಣ ಇಲಾಖೆಯು ಉತ್ತಮ ನಿರ್ಣಯ ತೆಗೆದುಕೊಂಡಿದೆ ಎಂದು ಪಾಲಕರು ಅಭಿಪ್ರಾಯಪಟ್ಟಿದ್ದಾರೆ.