ಸುದ್ಧಿಕನ್ನಡ ವಾರ್ತೆ
ಹೊರ ರಾಜ್ಯದ ರಜಿಸ್ಟ್ರೇಶನ್ ಹೊಂದಿರುವ ವಾಹನಗಳನ್ನು ಗೋವಾದಲ್ಲಿ ಹೆಚ್ಚು ದಿನ ಬಳಕೆ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಗೋವಾದಲ್ಲಿ ಓಡಾಟ ನಡೆಸುವ ಹೊರ ರಾಜ್ಯಗಳ ವಾಹನಗಳಿಗೆ ಗೋವಾ ರಜಿಸ್ಟ್ರೇಶನ್ ಖಡ್ಡಾಯಗೊಳಿಸಬೇಕು ಎಂದು ಗೋವಾ ವಿಧಾನಸಭೆಯಲ್ಲಿ ಆಘ್ರಹ ವ್ಯಕ್ತವಾಗಿದೆ. ಇದರಿಂದಾಗಿ ಗೋವಾದಲ್ಲಿ ಕರ್ನಾಟಕ ರಜಿಸ್ಟ್ರೇಶನ್ ಹೊಂದಿರುವ ಕರ್ನಾಟಕದ ವಾಹನ ಮಾಲೀಕರಿಗೆ ತೊಂದರೆಯುಂಟಾಗುವಂತಾಗಿದೆ.
ಈ ಕುರಿತಂತೆ ಶಸಕಿ ದಿಲಾಯಲಾ ಲೋಬೊ ರವರು ಗೋವಾ ವಿಧಾನಸಭೆಯಲ್ಲಿ ಆಘ್ರಹಿಸಿದ್ದಾರೆ. ಗೋವಾದಲ್ಲಿ ಬಹು ಮುಖ್ಯವಾಗಿ ಹೊರ ರಾಜ್ಯದ ರಜಿಸ್ಟ್ರೇಶನ್ ಹೊಂದಿರುವ ವಾಹನಗಳನ್ನು ಡಿಲೇವರಿ ಬಾಯ್ ಎಂದು ಕೆಲಸ ಮಾಡುವವರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇಷ್ಟೇ ಅಲ್ಲದೆಯೇ ಗೋವಾದಲ್ಲಿ ವಾಸಿಸುವ ಹೊರ ರಾಜ್ಯದ ಹೆಚ್ಚಿನ ಜನರು ಹೊರ ರಾಜ್ಯದ ರಜಿಸ್ಟ್ರೇಶನ್ ವಾಹನಗಳನ್ನೇ ಬಳಕೆ ಮಾಡುತ್ತಾರೆ. ಇವುಗಳನ್ನು ಪತ್ತೆ ಹಚ್ಚಲು ಗೋವಾದಲ್ಲಿ ಬಾಡಿಗೆಗೆ ವಾಸಿಸುವ ಹೊರ ರಾಜ್ಯದ ಜನರ ತಪಾಸಣೆ ನಡೆಸಿದಂತೆಯೇ ವಾಹನಗಳ ತಪಾಸಣೆಯನ್ನೂ ನಡೆಸಬೇಕು ಗೋವಾದಲ್ಲಿ ಬಳಕೆಯಾಗುವ ವಾಹನಗಳ ರಜಿಸ್ಟ್ರೇಶನ್ ಗೋವಾ ರಾಜ್ಯದ್ದೇ ಆಗಿರುವುದು ಖಡ್ಡಾಯವಾಗಿದೆ ಎಂದು ಅವರು ಅಭಿಪ್ರಾಯ ಮಂಡಿಸಿದರು.
ಗೋವಾದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ವಾಸಿಸುತ್ತಿದ್ದಾರೆ. ಇಷ್ಟೇ ಅಲ್ಲದೆಯೇ ವಲಸೆ ಕನ್ನಡಿಗರ ಸಂಖ್ಯೆ ಕೂಡ ಹೆಚ್ಚಿದೆ. ಆದರೆ ಗೋವಾದಲ್ಲಿ ವಾಹನ ಬಳಕೆ ಮಾಡಬೇಕಾದರೆ ಈ ವಾಹನ ಸವಾರರು ಕರ್ನಾಟಕ ನೊಂದಣಿಯನ್ನು ಬದಲಾಯಿಸಿ ಗೋವಾದ ರಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕಾದರೆ ಅನಿವಾರ್ಯವಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗಲಿದೆ. ಇದರಿಂದಾಗಿ ಗೋವಾದಲ್ಲಿ ನೆಲೆಸಿರುವ ಹೆಚ್ಚಿನ ಕನ್ನಡಿಗರಿಗೆ ತೊಂದರೆಯಾಗಲಿದೆ.
ಗೋವಾದಲ್ಲಿ ಡಿಲೇರಿ ಬಾಯ್ ಆಗಿ ಕೆಲಸ ಮಾಡುವಂತಹ ಅದೆಷ್ಟೋ ಕನ್ನಡಿಗರಿದ್ದಾರೆ. ಅವರು ಕರ್ನಾಟಕದಲ್ಲಿ ಸಾಲಸೂಲ ಮಾಡಿ ಬೈಕ್ ಖರೀದಿಸಿ ಗೋವಾಕ್ಕೆ ಬಂದು ಇಲ್ಲಿ ಉದರ ನಿರ್ವಹಣೆಗೆ ಡಿಲೇವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಇಂತಹ ಬಡ ಕುಟುಂಬದವರು ಮತ್ತೆ ಗೋವಾದಲ್ಲಿ ಅದೇ ಬೈಕ್ ಗೆ ಗೋವಾ ರಜಿಸ್ಟ್ರೇಶನ್ ಮಾಡಿಸಬೇಕಾದರೆ ಹೆಚ್ಚಿನ ತೊಂದರೆ ಎದುರಾಗಲಿದೆ. ಗೋವಾ ಸರ್ಕಾರವು ಹೊರ ರಾಜ್ಯದ ವಾಹನಗಳಿಗೆ ಗೋವಾ ರಜಿಸ್ಟ್ರೇಶನ್ ಖಡ್ಡಾಯಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.