ಸುದ್ಧಿಕನ್ನಡ ವಾರ್ತೆ
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಗೋವಾದಿಂದ ನಡೆಯುತ್ತಿರುವ ಅಕ್ರಮ ಮದ್ಯ ಸಾಗಾಟದ ತಡೆಗೆ ಗೋವಾ ಸರ್ಕಾರ ಕಟ್ಟುನಿಟ್ಟಿನ ಕ್ರಮ ಹಾಗೂ ವಿಶೇಷ ಉಪಾಯಯೋಜನೆಯನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಗೋವಾ-ಕರ್ನಾಟಕ ಗಡಿಯಲ್ಲಿಯೂ ಎಲ್ಲ ವಾಹನಗಳ ಖಡ್ಡಾಯ ತಪಾಸಣೆ ನಡೆಯಲಿದೆ.

ಗೋವಾದಿಂದ ನೆರೆಯ ರಾಜ್ಯಗಳಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಅಕ್ರಮ ತಡೆಗೆ ವಿಶೇಷ ಉಪಾಯಯೋಜನೆಯನ್ನು ಜಾರಿಗೆ ತರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಗೋವಾ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೆಚ್ಚಾಗಿ ಗೋವಾದಿಂದ ನಡೆಯುತ್ತಿರುವ ಅಕ್ರಮ ಮದ್ಯ ಸಾಗಾಟ ತಡೆಗೆ ಗೋವಾ ಸರ್ಕಾರವು ಮದ್ಯದ ಬಾಟಲಿಗಳ ಮೇಲೆ ಹಾಲ್ ಮಾರ್ಕ ಸ್ಟಿಕ್ಕರ್ ಅಳವಡಿಸಲಿದೆ. ಇಷ್ಟೇ ಅಲ್ಲದೆಯೇ ಗೋವಾ-ಕರ್ನಾಟಕ ಗಡಿ ಭಾಗ ಮತ್ತು ಗೋವಾ-ಮಹಾರಾಷ್ಟ್ರ ಗಡಿ ಭಾಗದಲ್ಲಿ ತಪಾಸಣೆ ಚೆಕ್ ಪೋಸ್ಟ ನಿರ್ಮಿಸಲು ಗೋವಾ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಗೋವಾ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಮುಂಬರುವ ದಿನಗಳಲ್ಲಿ ಗೋವಾ ಗಡಿಯಲ್ಲಿ ಹೆಚ್ಚಿನ ತಪಾಸಣೆ ನಡೆಯಲಿದ್ದು, ಅಕ್ರಮ ಮದ್ಯ ಸಾಗಾಟಕ್ಕೆ ಕಡಿವಾಣ ಹಾಕಲು ಗೋವಾ ಸರ್ಕಾರ ಮುಂದಾಗಿದೆ.