ಸುದ್ದಿ ಕನ್ನಡ ವಾರ್ತೆ

ಕುಮಟಾ: ತಾಲೂಕಿನಲ್ಲಿ ಗಾಳಿ ಸಹಿತ ಮಳೆಯ ಅರ್ಭಟ ಹೆಚ್ಚಾಗಿದ್ದು, ಕಳೆದ 24 ಗಂಟೆಯಲ್ಲಿ 113.3 ಮಿ.ಮಿ. ದಾಖಲೆಯ ಮಳೆಯಾದ ಕಾರಣ ಕೆಲವೆಡೆಗಳಲ್ಲಿ ನೆರೆ ಉಂಟಾಗಿ ಖಾಳಜಿ ಕೇಂದ್ರಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಊರಕೇರಿ ಗ್ರಾಮದ ಕೆಳಗಿಕೇರಿ ಯಲ್ಲಿ ಕೃತಕ ನೆರೆ ಉಂಟಾಗಿದ್ದು, ಸುಮಾರು 17 ಕುಟುಂಬದ ಜನರನ್ನು ಖಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಬಡಗಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಕೂಜಳ್ಳಿ ಹಾಗೂ ವಾಲಗಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.ಕೊನಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರೇಕಟ್ಟು ಗ್ರಾಮದ ಜನರನ್ನು ಸ್ಥಳಾಂತಿರಿಸಲಾಗಿದೆ.10 ಕುಟುಂಬಗಳ 23 ಜನರು ಆಶ್ರಯ ಪಡೆದಿದ್ದಾರೆ.

 

ವಾಲಗಳ್ಳಿಯ ಕಡವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಳಗಿನ ಕೇರಿ ಹಾಗೂ ಗುಮ್ಮನಗುಡಿ ಮಜಿರೆಯ ಜನರನ್ನು ಸ್ಥಳಾಂತಿರಿಸಲಾಗಿದ್ದು, 12 ಕುಟುಂಬಗಳ 32 ಜನರು ಆಶ್ರಯ ಪಡೆದಿರುತ್ತಾರೆ.