ಸುದ್ದಿ ಕನ್ನಡ ವಾರ್ತೆ
ಶಿರಸಿ: ಶಿರಸಿ ಕುಮಟಾ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರಕಾರ ತಲೆ ಎತ್ತುವಂತಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಧಾನ ವ್ಯಕ್ತಪಡಿಸಿದರು.
ಅವರು ತಾಲೂಕಿನ ರಾಗಿಹೊಸಳ್ಳಿ ಬಳಿಯ ಬೆಣ್ಣೆಹೊಳೆ ಸೇತುವೆಯ ಕಾಮಗಾರಿ ವೀಕ್ಷಿಸಿದ ವೇಳೆ, ಗುತ್ತಿಗೆ ಕಂಪನಿಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಶಿರಸಿ ಕುಮಟಾ ಹಾಗೂ ಶಿರಸಿ ಹಾವೇರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗೆ ಜನರು ಕಷ್ಟ ಪಡುತ್ತಿದ್ದಾರೆ. ರಸ್ತೆ ಸಂಚಾರ ನಿರ್ಬಂಧಿಸಿಕೊಟ್ಟರೂ ಕೆಲಸ ಆಗಿಲ್ಲ. ಗುತ್ತಿಗೆ ಅವಧಿ ಮುಗಿದಿಲ್ಲವಾ? ಎಂದೂ ಕೇಳಿದರು.
ಸಂಚಾರ ನಿರ್ಬಂಧಿಸಿದರೆ, ಜನರಿಗೆ ಸಂಚಾರಕ್ಕೆ ತೊಂದರೆ ಜನ ಏನು ಹಾರಿಕೊಂಡು ಹೋಗಬೇಕಾ? ಎಂದೂ ಕೇಳಿದರು.
ಅರಣ್ಯ ಭೂಮಿಯಲ್ಲಿ ರಸ್ತೆ ಅಭಿವೃದ್ಧಿ ಆಗಬೇಕು ಎಂಬ ಕಾರಣಕ್ಕೆ ಬಿಜಾಪುರದಲ್ಲಿ ಭೂಮಿ ನೀಡಲಾಗಿದೆ. ಆದರೂ ಅಭಿವೃದ್ದಿ ಪೂರ್ಣ ಮಾಡಿಲ್ಲ ಎಂದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಭೀಮಣ್ಣ ನಾಯ್ಕ, ಡಿಸಿ ಲಕ್ಷ್ಮೀಪ್ರಿಯಾ, ಎಸಿ ಕಾವ್ಯಾರಾಣಿ ಇತರರು ಇದ್ದರು.